ಕಷ್ಟಗಳೇ ನೀವೆಲ್ಲಿ ಖುಷಿಯು ಮನೆಯೆಲ್ಲಾ ತುಂಬಿರುವಾಗ ಪುಟ್ಟ ಮನೆಯಲ್ಲಿ ವಿಶಾಲವಾದ ಮನಸ್ಸಿರುವಾಗ ಸಮಯವೇ ಸಂಪತ್ತು. ಸಹನೆಯೇ ಸಾಕತ್ತು ಇದು ನಮ್ಮ ಅರ್ಜುನನ ಕಥೆ ಮಾತ್ರವಲ್ಲ, ಪ್ರತಿ ಮನೆಯ ಮನಸ್ಸಿನ ಕಥೆ ಇದು ಅರ್ಜುನ ಸನ್ಯಾಸಿ ಚಿತ್ರದ ಕಟ್ಟ ಕಡೆಯಲ್ಲಿ ಕಾಣಿಸಿಕೊಳ್ಳುವ ಸಾಲುಗಳು. ಈ ಸಾಲುಗಳಿಗೆ ಅನ್ವರ್ಥದಂತೆ ಮೂಡಿಬಂದಿರುವ ಸಿನಿಮಾ ಅರ್ಜುನ ಸನ್ಯಾಸಿ. ಚಿತ್ರದ ಹೆಸರು ಅರ್ಜುನ ಸನ್ಯಾಸಿ ಅಂತಿದೆ ನಿಜ. ಹಾಗಂತ ಇದು ಸನ್ಯಾಸಿಯೊಬ್ಬನ ಲೈಫ್ ಸ್ಟೋರಿ ಅಲ್ಲ. ಇವತ್ತಿನ ಜನಗರದ ಜೀವನ ಮದುವೆಯಾಗಿದ್ದವರನ್ನೂ ಅವರವರದ್ದೇ ಖಾಸಗೀ […]
ಅವನೊಬ್ಬ ರಾಜ. ಸಮೃದ್ಧವಾದ ರಾಜ್ಯ. ಅವನ ಖುಷಿಯೇ ತಮ್ಮ ಖುಷಿ ಅಂತಾ ಭಾವಿಸಿದ ಜನರು. ಎಲ್ಲವೂ ಇದ್ದ ಆ ರಾಜನಿಗೆ ಕೊರತೆ ಅಂತಾ ಇದ್ದಿದ್ದು ಒಂದೇ. ಅದು ನೆಮ್ಮದಿ. ನಾಲ್ಕಾರು ದೇವಸ್ಥಾನ ತಿರುಗಿ, ಹತ್ತಾರು ದೀಪಸ್ನಾನ ಮಾಡಿದ. ದೇವರಿಗೆ ತುಲಾಭಾರ, ಪಿತೃಗಳಿಗೆ ಪಿಂಡ ಇಟ್ಟರೂ ರಾಜನ ಕಣ್ಣಿಗೆ ನೆಮ್ಮದಿಯ ನಿದ್ರೆ, ಮನಸ್ಸಿಗೆ ಶಾಂತಿ ಮಾತ್ರ ಸಿಗೋಗಲೇಇಲ್ಲ. ನೆಮ್ಮದಿಯನ್ನು ಅರಸಿ ಹೋದ ರಾಜನಿಗೆ ಅದೊಂದು ದಿನ ಭೂತಾರಾಧಕರು ಸಿಗುತ್ತಾರೆ. ನನ್ನ ಕೂಗು ಎಲ್ಲಿಯವರೆಗೆ ಕೇಳಿಸುತ್ತದೋ ಅಲ್ಲಿಯವರೆಗೆ ಜಾಗವನ್ನು ಕಾಡಿನ […]
ಭಾರತದಂತಾ ದೇಶದಲ್ಲಿ ಸದ್ಯ ಅತ್ಯಂತ ಕೆಟ್ಟ ವಾತಾವರಣವಿದೆ. ಈ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಬರ್ತಿಂದ ಹಿಡಿದು ಡೆತ್ತಿನ ತನಕ ಜಾತಿಯೇ ಎಲ್ಲವನ್ನೂ ನಿಭಾಯಿಸುತ್ತದೆ. ಕೋಮುದ್ವೇಷದ ಖಾಯಿಲೆ ದೇಶವನ್ನು ಕೊರೋನಾಗಿಂತಾ ಹೆಚ್ಚು ಹೈರಾಣು ಮಾಡಿದೆ. ಸಿನಿಮಾಗಳಲ್ಲಂತೂ ಜಾತಿ, ಧರ್ಮಗಳ ಬಗ್ಗೆ ಮಾತಾಡುವುದೇ ಮಹಾಪರಾಧ ಅಂತಾ ಅಂದುಕೊಂಡವರೂ ಇದ್ದಾರೆ. ಇಂಥವರ ನಡುವೆ ಕೋಮು ವಿಷ ಬೀಜ ಬಿತ್ತುವವರನ್ನು ನೇರಾನೇರ ಅಣಕ ಮಾಡುವುದೆಂದರೆ ಸುಮ್ಮನೇ ಮಾತಲ್ಲ. ನಿರ್ದೇಶಕ ವಿಜಯ ಪ್ರಸಾದ್ ಅಂಥದ್ದೊಂದು ಪ್ರಯತ್ನ ಮಾಡಿದ್ದಾರೆ. ಚೇಷ್ಟೆ, ಹಾಸ್ಯ, ಪೋಲಿತನಗಳನ್ನೆಲ್ಲಾ ಮಾತುಗಳಲ್ಲಿ ಮಿಕ್ಸ್ ಮಾಡಿ […]
ಅವರು ಮೂವರು. ತೀರಾ ಸಣ್ಣ ವಯಸ್ಸಿನಿಂದಲೂ ಒಟ್ಟಿಗೇ ಆಡಿ ಬೆಳೆದವರು. ಜೊತೆಯಲ್ಲೇ ಓದಿದವರು ಕೂಡಾ. ಇಬ್ಬರು ಹುಡುಗರ ನಡುವೆ ಅವಳೊಬ್ಬಳು ಹುಡುಗಿ. ಅಲ್ಲೀತನಕ ಬದುಕಿನಲ್ಲಿ ಒಬ್ಬರನ್ನೊಬ್ಬರು ಬಿಡದಂತೆ ಅಂಟಿಕೊಂಡೇ ತಿರುಗಿರುತ್ತಾರೆ. ಒಬ್ಬನಿಗೆ ಮನೆಯಲ್ಲಿ ಹುಡುಗಿ ನೋಡಿ ಮದುವೆ ಮಾಡುತ್ತಾರೆ. ತಾಯಿ ಇಲ್ಲದೆ ಬೆಳೆದ ಇವಳಿಗೂ ಮದುವೆ ಮಾಡಲು ಅಪ್ಪ ನಿರ್ಧರಿಸಿರುತ್ತಾರೆ. ಗೊತ್ತೂ ಗುರಿ ಇಲ್ಲದ, ಸ್ನೇಹ ಸಲುಗೆ ಇಲ್ಲದ, ಅಸಲಿಗೆ ಪರಿಚಯವೇ ಇಲ್ಲದ, ಎಲ್ಲಿಂದಲೋ ಬಂದವನ ಜೊತೆ ಬದುಕು ಆರಂಭಿಸೋದು ಅವಳಿಗೆ ಬಿಲ್ ಕುಲ್ ಇಷ್ಟವಿಲ್ಲ. ತನ್ನ […]
ಸಾಮಾನ್ಯಕ್ಕೆ ಸಿನಿಮಾ ಅಂದರೆ ಯಾವುದಾದರೂ ಒಂದು ಜಾನರನ್ನು ಸೆಲೆಕ್ಟ್ ಮಾಡಿಕೊಂಡು ರೂಪಿಸಿರುತ್ತಾರೆ. ಅದನ್ನು ಮೀರಿ, ಹಿಂದೆ ಪುಟ್ಟಣ್ಣನವರು ʻಹಂಗು, ಅಕ್ಕರೆ, ಮುನಿತಾಯಿʼ ಎನ್ನುವ ಮೂರು ಕಥೆಗಳನ್ನು ಒಂದು ಕಡೆ ಸೇರಿಸಿ ಕಥಾಸಂಗಮ ಹೆಸರಿನ ಸಿನಿಮಾ ಮಾಡಿದ್ದರು. ಇತ್ತೀಚೆಗೆ ನಾಲ್ಕಾರು ಕಥೆಗಳನ್ನು ಸೇರಿಸಿ ಒಂದು ಚಿತ್ರ ರೂಪಿಸುವ ಟ್ರೆಂಡ್ ಆರಂಭವಾಗಿದೆ. ರಿಷಬ್ ಶೆಟ್ಟಿ ಕೂಡಾ ಕಥಾ ಸಂಗಮದ ಹೆಸರಿನಲ್ಲಿ ಏಳು ಕಥೆಗಳನ್ನು ಒಟ್ಟು ಸೇರಿಸಿದ್ದರು. ಈಗ ಬದುಕಿನ ಒಂಭತ್ತು ರಸಗಳನ್ನು ಸೇರಿಸಿ ಒಂಭತ್ತು ಭಿನ್ನ ಕಥೆಗಳೊಂದಿಗೆ ತೆರೆಗೆ ಬಂದಿರುವ […]