ಅಟ್ಟಯ್ಯನ ಮರ್ಡರ್ ಮಿಸ್ಟ್ರಿ!

Picture of Cinibuzz

Cinibuzz

Bureau Report


ಜೂನಿಯರ್ ಉಪೇಂದ್ರ ಅಂತಲೇ ಖ್ಯಾತಿಯಾದ ಲೋಕೇಂದ್ರ ಸೂರ್ಯ ನಿರ್ದೇಶಿಸಿ ನಟಿಸಿರುವ ಸಿನಿಮಾ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು. ನೈಜಾತಿನೈಜವಾಗಿ ಮೂಡಿಬಂದಿರುವ ಈ ಸಿನಿಮಾವನ್ನೊಮ್ಮೆ ನೋಡಿದರೆ ಯಾರಿಗಾದರೂ ಒಂದೆರಡು ದಿನಗಳ ಕಾಲ ಈ ಚಿತ್ರದ ಕತೆ ಕಾಡದೇ ಇರದು.
ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಸಿನಿಮಾದ ಪೋಸ್ಟರುಗಳಲ್ಲೇ ನಮೂದಿಸಿರುವಂತೆ ಇದು ನೈಜ ಘಟನೆಯ ಸ್ಪೂರ್ತಿ ಪಡೆದು ರೂಪಿಸಿರುವ ಚಿತ್ರ. ಈ ಸಿನಿಮಾದ ಗತೆ ಆರಂಭಗೊಂಡ ಕತೆಯೇ ಒಂಥರಾ ಥ್ರಿಲ್ಲಿಂಗ್ ಎನಿಸುತ್ತದೆ. ಅದೊಂದು ಕೊಲೆ ಕೇಸಿನ ತನಿಖೆಯೊಂದಿಗೆ ಆರಂಭವಾದ ಎಳೆ. ಹಂದಿ ಸಾಕಿದವಳೊಬ್ಬಳ ದಾರುಣ ಸಾವವಿನ ಹೊಣೆ ಮತ್ಯಾರದ್ದೋ ಹಣೆಗೆ ‘ಆರೋಪಿ ಪಟ್ಟ ನೀಡುರುತ್ತದೆ.

ಆದ ಜೈಲಲ್ಲಿದ್ದಾಗಲೇ ಆತನ ಕುಟುಂಬದಲ್ಲಿ ನಡೆಯಬಾರದ್ದೊಂದು ಘಟನೆ ನಡೆದು ಅದು ಇನ್ಯಾವುದೋ ಅನಾಹುತಕ್ಕೆ ಕಾರಣವಾಗಿತ್ತು. ಈ ಕೇಸಿನ ಸಂಬಂಧವಾಗಿ ತನಿಖಾ ತಂಡ ಬೆಂಗಳೂರಿಗೆ ಬಂದಿತ್ತು. ಹಾಗೆ ಬಂದ ಪೊಲೀಸರಲ್ಲಿಬ್ಬರು ನಿರ್ದೇಶಕ ಲೋಕೇಂದ್ರ ಸೂರ್ಯ ಅವರ ಮನೆಯಲ್ಲಿ ತಂಗಬೇಕಾದ ಸಂದರ್ಭ ಸೃಷ್ಟಿಯಾಗಿತ್ತು. ಆ ಪೊಲೀಸರು ಹೇಳಿದ ವಿವರಗಳು ದಿನಗಟ್ಟಲೆ, ವಾರಗಟ್ಟಲೆ ಲೋಕೇಂದ್ರ ಸೂರ್ಯ ಅವರನ್ನು ಕಾಡುತ್ತಲೇ ಇತ್ತು. ಆಗ ಲೋಕೇಂದ್ರ ನಿರ್ಧರಿಸಿದ್ದು ‘ಈ ಕಥೆಯನ್ನೇ ಸಿನಿಮಾ ಮಾಡಬೇಕು ಅಂತಾ. ಹೀಗೆ ಶುರುವಾದ ಕಥೆ ಇವತ್ತು ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಸಿನಿಮಾ ಆಗಿ ರೂಪುಗೊಂಡಿದೆ.
ಯಾರೂ ಊಹಿಸಲು ಆಗದಂಥ ಕಥಾವಸ್ತು ಈ ಸಿನಿಮಾದ್ದು. ಒಂದು ಒಂದು ವೇಳೆ ಇಂಥ ಕಥೆಯ ಚಿತ್ರ ಪರಭಾಷೆಗಳಲ್ಲಿ ಬಂದಿದ್ದಿರೆ ಅಲ್ಲಿನ ಜನ ತಲೆಮೇಲೆ ಹೊತ್ತು ಮೆರೆಸುತ್ತಿದ್ದರು. ಅದೇ ಸಿನಿಮಾವನ್ನು ನೋಡಿ ನಮ್ಮವರು ‘ಒಳ್ಳೇ ಕಥೆಯ ಸಿನಿಮಾ ಅಂತಾ ಕೊಂಡಾಡುತ್ತಿದ್ದರು. ಆದರೆ ಲೋಕೇಂದ್ರ ಸೂರ್ಯ ಮತ್ತು ಅವರ ತಂಡ ಗಾಂಧಿನಗರಕ್ಕೆ ಹೊಸಬರು ಅನ್ನೋ ಕಾರಣಕ್ಕೋ ಅಥವಾ ಅವರ ಬಳಿ ಖರ್ಚು ಮಾಡಲು ಹೇರಳವಾದ ಹಣವಿಲ್ಲ ಅನ್ನೋ ಕಾರಣಕ್ಕೋ ಗೊತ್ತಿಲ್ಲ ಈ ಸಿನಿಮಾಗೆ ಬೇಕಾದ ಸೂಕ್ತ ಪ್ರಚಾರ ಸಿಗುತ್ತಿಲ್ಲ. ಈ ಮೂಲಕ ‘ಸಿನಿಬಜ಼್ ತಮ್ಮಲ್ಲಿ ಮಾಡುತ್ತಿರುವ ಮನವಿಯೆಂದರೆ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಸಿನಿಮಾ ನಮ್ಮ ನೆಲದ ಕಥೆ ಹೊಂದಿರುವ, ನೋಡಿದವರನ್ನು ಕಾಡುವ ಸಿನಿಮಾ. ಮಿಸ್ ಮಾಡದೇ ಒಮ್ಮೆ ನೋಡಿ….

#

ಇನ್ನಷ್ಟು ಓದಿರಿ

Scroll to Top