ದರ್ಶನ್ ಬರ್ತಡೇಗೆ ರೆಡಿಯಾಗಿದೆ ಅದ್ಭುತ ಹಾಡು! ಅಭಿಮಾನಿಗಳನ್ನ ಖುಷಿಗೊಳಿಸಲಿದೆ ಕವಿರತ್ನರ ಕಾಣಿಕೆ!

Picture of Cinibuzz

Cinibuzz

Bureau Report


ಕವಿರತ್ನ ಡಾ.ವಿ ನಾಗೇಂದ್ರ ಪ್ರಸಾದ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೆಗೆ ಭರ್ಜರಿ ಗಿಫ್ಟೊಂದನ್ನು ಕೊಡಲಿದ್ದಾರೆಂಬ ಬಗ್ಗೆ ಈ ಹಿಂದೆಯೇ ಸಿನಿಬಜ಼್ ವರದಿ ಮಾಡಿತ್ತು. ಇದೀಗ ನಾಗೇಂದ್ರ ಪ್ರಸಾದ್ ಪಟ್ಟಾಗಿ ಕೂತು ದರ್ಶನ್ ಮತ್ತು ಅವರ ಅಭಿಮಾನಿ ಸಮೂಹ ಥ್ರಿಲ್ ಆಗುವಂಥಾ ಅದ್ಭುತವಾದ ಗಿಫ್ಟನ್ನು ರೆಡಿ ಮಾಡಿದ್ದಾರೆ!

ನಾಗೇಂದ್ರ ಪ್ರಸಾದ್ ದರ್ಶನ್ ಬರ್ತಡೆಗೆ ಸ್ಪೆಷಲ್ ಸಾಂಗ್ ಒಂದನ್ನು ಮಾಡಿದ್ದಾರೆ. ಇದಕ್ಕೆ ಸಂಗೀತ, ಸಾಹಿತ್ಯವನ್ನೂ ಅವರೇ ನೀಡಿದ್ದಾರೆ. ಸೂರ್ಯ ಬಿಟ್ಟ ಬಾಣ, ಬಾಕ್ಸಾಫೀಸ್ ಸುಲ್ತಾನ ಎಂಬಂಥಾ ಆಕರ್ಷಕ ಸಾಲುಗಳಿರೋ ಈ ಹಾಡನ್ನು ದರ್ಶನ್ ಅಭಿಮಾನಿಗಳೇ ಬಿಡುಗಡೆ ಮಾಡಲಿದ್ದಾರೆ.

ಈ ಹಾಡು ಫೆಬ್ರವರಿ ಹದಿನಾಲ್ಕರ ಸಂಜೆ ಮ್ಯೂಸಿಕ್ ಬಜ಼ಾರ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಇದನ್ನು ದರ್ಶನ್ ಹುಟ್ಟುಹಬ್ಬಕ್ಕೆಂದೇ ರೂಪಿಸಿರುವ ನಾಗೇಂದ್ರ ಪ್ರಸಾದ್, ಅಭಿಮಾನಿಗಳಿಗೆ ಅರ್ಪಿಸಲಿದ್ದಾರೆ. ಈ ಹಾಡಿನ ಪ್ರತೀ ಸಾಲುಗಳೂ ದರ್ಶನ್ ಅಭಿಮಾನಿಗಳ ಪಾಲಿಗೆ ಹಬ್ಬವಾಗುವಂತೆ ನಾಗೇಂದ್ರ ಪ್ರಸಾದ್ ರೂಪಿಸಿದ್ದಾರೆ. ವಿಶೇಷವೆಂದರೆ ಈ ಹಾಡಿನ ಬಿಡುಗಡೆ ಕೂಡಾ ಅಭಿಮಾನಿಗಳಿಂದಲೇ ನಡೆಯುತ್ತಿದೆ.  ದರ್ಶನ್ ಅವರ ಅದೆಷ್ಟೋ ಸಿನಿಮಾಗಳಿಗೆ ಯಶಸ್ವಿ ಹಾಡುಗಳನ್ನು ಬರೆದಿರುವವರು ನಾಗೇಂದ್ರ ಪ್ರಸಾದ್. ದರ್ಶನ್ ಅತ್ಯಾಪ್ತರಲ್ಲಿ ಅವರೂ ಪ್ರಮುಖರು. ಈ ಬಾರಿ ನಾಗೇಂದ್ರ ಪ್ರಸಾದ್ ತಮ್ಮ ಶಕ್ತಿಯಂತಿರೋ ಹಾಡಿನ ಮೂಲಕವೇ ದರ್ಶನ್ ಬರ್ತಡೆಗೆ ಶುಭ ಕೋರಲಿದ್ದಾರೆ.

#

ಇನ್ನಷ್ಟು ಓದಿರಿ

Scroll to Top