ಪ್ರೇಮಿಗಳಿಗೆಂದೇ ಬಂತು ಪಡ್ಡೆಹುಲಿಯ ಭಾವನಾತ್ಮಕ ಹಾಡು!

Picture of Cinibuzz

Cinibuzz

Bureau Report


ಪ್ರೇಮಕವಿ ಬಿ.ಆರ್ ಲಕ್ಷ್ಮಣರಾಯರು ಬರೆದ ಹೇಳಿ ಹೋಗು ಕಾರಣ ಎಂಬ ಭಾವಗೀತೆ ಒಂದು ತಲೆಮಾರಿನ ಪ್ರೇಮ ಯಾತನೆಗೆ ಮದ್ದಾಗಿದೆ. ಸಿ ಅಶ್ವತ್ಥ್ ಅವರ ಕಂಠದಲ್ಲಿ ಪ್ರಸಿದ್ಧಿ ಪಡೆದಿದ್ದ ಈ ಹಾಡು ಪ್ರೇಮದ ಎಲ್ಲ ಭಾವಗಳನ್ನೂ ಉದ್ದೀಪಿಸಿದೆ, ನೋವುಗಳನ್ನ ಹಿವಾಗಿ ಸವರಿ ಸಂತೈಸಿದೆ. ಇದೇ ಭಾವಗೀತೆಯೀಗ ಅಜನೀಶ್ ಲೋಕನಾಥ್ ಮಾಂತ್ರಿಕ ಸಂಗೀತ ಸ್ಪರ್ಶದೊಂದಿಗೆ ಹೊಸ ತಲೆಮಾರನ್ನೂ ತಲುಪಿಕೊಂಡಿದೆ!

ಅಜನೀಶ್ ಲೋಕನಾಥ್ ಪಡ್ಡೆಹುಲಿ ಚಿತ್ರಕ್ಕಾಗಿ ಹೇಳಿ ಹೋಗು ಕಾರಣ ಗೀತೆಗೆ ಹೊಸಾ ಹುಟ್ಟು ನೀಡಿದ್ದಾರೆ. ಈ ವರೆಗೂ ಪಡ್ಡೆಹುಲಿಯ ಒಂದಷ್ಟು ಹಾಡುಗಳು ಹೊರ ಬಂದಿವೆ. ಅವೆಲ್ಲವೂ ಹಿಟ್ ಕೂಡಾ ಆಗಿವೆ. ಪ್ರತಿಯೊಂದು ಹಾಡಿನಲ್ಲಿಯೂ ಒಂದೊಂದು ವಿಶೇಷತೆಗಳೊಂದಿಗೇ ಪ್ರೇಕ್ಷಕರನ್ನ ತಲುಪಬೇಕೆಂಬುದು ಗುರುದೇಶಪಾಂಡೆ ಅವರ ಅಭಿಲಾಶೆ. ಅದರನ್ವಯವೇ ಈ ಹಾಡೀಗ ಹೊರ ಬಂದು ಎಲ್ಲೆಡೆ ಹರಿದಾಡುತ್ತಿದೆ.

ಈ ಹಾಡನ್ನು ಸಿದ್ಧಾರ್ಥ್ ಮಹಾದೇವನ್ ಮತ್ತು ಗುಬ್ಬಿ ಹಾಡಿದ್ದಾರೆ. ಬಿ ಆರ್ ಲಕ್ಷ್ಮಣರಾಯರು ಬರೆದ ಈ ಹಾಡು ಸಿ ಅಶ್ವತ್ಥ್ ಧ್ವನಿಯಲ್ಲಿ ಮಂದ್ರ ಸಂಗೀತದೊಂದಿಗೆ ಜನರನ್ನ ಆವರೆಇಸಿಕೊಂಡಿತ್ತು. ಅದಕ್ಕೀಗ ಇಂದಿನ ತಲೆಮಾರಿನ ಆವೇಗಗಳನ್ನ ಹೊಂದಿರುವ ರ‍್ಯಾಪ್ ಶೈಲಿಯನ್ನು ಹದವಾಗಿ ಬೆರೆಸಿ ಅಜನೀಶ್ ಹೊಸಾ ಟ್ರೆಂಡ್ ಹುಟ್ಟು ಹಾಕಿದ್ದಾರೆ.

ಈ ಹಾಡಿನ ಮೂಲಕವೇ ಶ್ರೇಯಸ್ ಅಭಿನಯದ ಪಡ್ಡೆಹುಲಿ ಚಿರತ್ರ ಮತ್ತಷ್ಟು ನಿರೀಕ್ಷೆ ಮೂಡಿಸಿದೆ

#

ಇನ್ನಷ್ಟು ಓದಿರಿ

Scroll to Top