ಉದ್ಘರ್ಷದ ಥ್ರಿಲ್ಲರ್ ಟ್ರೈಲರ್ ಲಾಂಚ್ ಮಾಡಿದರು ದರ್ಶನ್!

Picture of Cinibuzz

Cinibuzz

Bureau Report


ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ಎಂದೇ ಹೆಸರಾಗಿರುವವರು ಸುನೀಲ್ ಕುಮಾರ್ ದೇಸಾಯಿ. ಅವರು ನಿರ್ದೇಶನ ಮಾಡಿರೋ ಬಹು ನಿರೀಕ್ಷಿತ ಉದ್ಘರ್ಷ ಚಿತ್ರದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದಾರೆ. ನಿರೀಕ್ಷೆಯಂತೆಯೇ ಈ ಟ್ರೈಲರ್ ಕ್ಷಣ ಕ್ಷಣವೂ ಕುತೂಹಲ ಕೆರಳಿಸುತ್ತಾ ಇಡೀ ಚಿತ್ರದ ಬಗ್ಗೆ ಎಲ್ಲರನ್ನೂ ಸೆಳೆಯುವಂತೆ ಮೂಡಿ ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಾವರಣಗೊಳಿಸಿರೋ ಈ ಟ್ರೈಲರ್‌ಗೆ ಕಿಚ್ಚಾ ಸುದೀಪ್ ಖಡಕ್ ಶೈಲಿಯಲ್ಲಿ ಧ್ವನಿ ನೀಡಿದ್ದಾರೆ. ಕಡೆಯಲ್ಲವರು ಮಾಸ್ಟರ್ ಆಫ್ ಸಸ್ಪೆನ್ಸ್ ಸುನೀಲ್ ಕುಮಾರ್ ದೇಸಾಯಿ ಮತ್ತೆ ಮರಳಿದ್ದಾರೆ ಅಂದಿದ್ದಾರೆ. ಇಡೀ ಟ್ರೈಲರ್ ಆ ಮಾತನ್ನು ಅಕ್ಷರಶಃ ಪುಷ್ಟೀಕರಿಸುವಂತಿದೆ.

ಮರ್ಡರ್ ಮಿಸ್ಟರಿಯ ಸುತ್ತಾ, ಕ್ಷಣ ಕ್ಷಣವೂ ಮೈನವಿರೇಳುವಂತೆ ಮಾಡೋ ಶೈಲಿಯಲ್ಲಿ ಉದ್ಘರ್ಷ ಮೂಡಿ ಬಂದಿದೆ ಅನ್ನೋ ಸೂಚನೆಯೂ ಈ ಮೂಲಕ ಸಿಕ್ಕಿದೆ. ಕನ್ನಡವೂ ಸೇರಿದಂತೆ ಬೇರೆ ಭಾಷೆಗಳಲ್ಲಿಯೂ ತಯಾರಾಗಿರೋ ಈ ಸಿನಿಮಾ ಮೂಲಕ ಮತ್ತೆ ದೇಸಾಯಿಯವರ ಸಸ್ಪೆನ್ಸ್ ಥ್ರಿಲ್ಲರ್ ಯುಗ ಶುರುವಾಗೋ ಲಕ್ಷಣಗಳೂ ಸ್ಪಷ್ಟವಾಗಿವೆ. ಕೆಲ ಜನಪ್ರಿಯ ಟಿವಿ ಶೋಗಳು ಸೇರಿದಂತೆ ಸಿಂಗಂ 3 ಚಿತ್ರದಲ್ಲಿಯೂ ಖಳನಾಗಿ ನಟಿಸಿದ್ದ ಠಾಕೂರ್ ಅನೂಪ್ ಸಿಂಗ್ ಈ ಚಿತ್ರದ ಮೂಲಕ ಮೊದಲ ಸಲ ಹೀರೋ ಆಗಿದ್ದಾರೆ. ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿಯೂ ಖಳನಾಗಿ ಅಬ್ಬರಿಸಿರೋ ಇವರನ್ನೇ ನಾಯಕನಾಗಿ ಮಾಡಬೇಕೆಂದುಕೊಂಡ ದೇಸಾಯಿ ಅದನ್ನೇ ಮಾಡಿದ್ದಾರೆ. ಈ ಮೂಲಕ ಅಜಾನುಬಾಹು ನಾಯಕನೊಬ್ಬ ಕನ್ನಡಕ್ಕೂ ಎಂಟ್ರಿ ಕೊಟ್ಟಂತಾಗಿದೆ.


ಮೂರು ಪಾತ್ರಗಳ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಈ ಚಿತ್ರ ಹೊಂದಿದೆ. ಠಾಕೂರ್ ಅವರ ಖಡಕ್ ಲುಕ್ಕಿಗೆ ತಕ್ಕುದಾದ ಪಾತ್ರವನ್ನೇ ದೇಸಾಯಿ ಸೃಷ್ಟಿಸಿದ್ದಾರೆ. ಆರಂಭದಿಂದಲೂ ದೇಸಾಯಿ ಅವರ ಚಿತ್ರಗಳನ್ನು ನೋಡಿಕೊಂಡೇ ಬಂದಿದ್ದ ಆರ್ ದೇವರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಜುನಾಥ್ ಡಿ ಮತ್ತು ರಾಜೇಂದ್ರ ಕುಮಾರ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top