ಮರ್ಡರ್ ಮಿಸ್ಟರಿ ಸಿನಿಮಾ ‘ತ್ರಯ’ ಟ್ರೇಲರ್ ರಿಲೀಸ್!

Picture of Cinibuzz

Cinibuzz

Bureau Report

ಸ್ಯಾಂಡಲ್ ವುಡ್ ನಲ್ಲಿ ಈಗೀಗ ಟೈಟಲ್ ಗಳದ್ದೇ ಬಾರಿ ಹವಾ. ಹೊಸ ಮುಖಗಳು ಇಂಡಸ್ಟ್ರಿಗೆ ಎಂಟ್ರಿ ಆಗುವ ಜತೆ ಜತೆಗೆ ಹೊಸ ಹೊಸ ಟೈಟಲ್ ಗಳ ಮೂಟೆಗಳನ್ನೇ ಹೊತ್ತು ತರುತ್ತಿದ್ದಾರೆ. ವಾರದಲ್ಲಿ ರಿಲೀಸ್ ಆಗುವ ಬಹುತೇಕ ಸಿನಿಮಾಗಳ ಪೈಕಿ ಒಂದೆರಡಾದರೂ ಡಿಫರೆಂಟ್ ಟೈಟಲನ್ನು ಹೊಂದಿರುವಂತದ್ದೆ. ಈ ಸಾಲಿಗೆ ಇದೀಗ ತ್ರಯ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಮರ್ಡರ್ ಮಿಸ್ಟರಿಯ ಸಸ್ಪೆನ್ಸ್ ಕಥಾನಕವಿರುವ ತ್ರಯ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿ, ರಿಲೀಸ್ ಗೆ ರೆಡಿಯಾಗಿದೆ.

ಸದ್ಯ ಈ ಚಿತ್ರದ ಹಾಡೊಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಎಲ್ಲೆಡೆ ಸದ್ದು ಮಾಡುತ್ತಿದೆ. ಹೌದು, ಸದಾ ಮೋಜು ಮಸ್ತಿಯಲ್ಲೇ ಬದುಕನ್ನು ದೂಡುವ ಗುಣವಿರುವ ಮೂವರು ಯುವಕರ ಪೈಕಿ ಒಬ್ಬನ ಜೀವನದಲ್ಲಿ ಹುಡುಗಿಯೊಬ್ಬಳ ಪ್ರವೇಶವಾಗುತ್ತದೆ, ಅಲ್ಲಿಂದ ಅವರ ಜೀವನದ ದಾರಿ ಎಲ್ಲೆಲ್ಲೋ ತೇಲುತ್ತದೆ, ಮುಂದೆ ಏನಾಗುತ್ತೆ ಎಂಬುದನ್ನು ಹೇಳುವ ಚಿತ್ರವೇ ‘ತ್ರಯ’.  ಇತ್ತೀಚೆಗಷ್ಟೇ ಈ ಸಂಜೆ ಕೆಂಪು ಎನ್ನುವ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಯತೀಶ್ ಮಹದೇವ್ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರೇಖಾ ಪಲ್ಲತ್ ಅವರ ಧ್ವನಿಯಲ್ಲಿ ಈ ಹಾಡು ಅದ್ಬುತವಾಗಿ ಮೂಡಿ ಬಂದಿದೆ. ಇನ್ನೂ ಈ ಚಿತ್ರವನ್ನು, ಕೃಷ್ಣಸಾಯಿ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಕೃಷ್ಣಸಾಯಿ ಆ್ಯಕ್ಷನ್ ಕಟ್ ಹೇಳಿರುವುದು ವಿಶೇಷವಾಗಿದೆ. ಇನ್ನು ಈ ಚಿತ್ರದಲ್ಲಿ ಅಮೋಘ್ ರಾಹುಲ್, ಶಂಕರ್ ಶ್ರೀಹರಿ, ಮದನ್ ಗೌಡ, ನಿಮಿಷ , ಸಂಯುಕ್ತ ಹೊರನಾಡು, ರಜನಿ ಭಾರದ್ವಾಜ್, ನೀತುಬಾಲ ಕೃಷ್ಣ ಹೆಬ್ಬಳೇ, ಮನ್ ದೀಪ್ ರಾಯ್, ಟೆನಿಸ್ ಕೃಷ್ಣ, ವಿಜಯ್ ಚೆಂಡೂರ್ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಇನ್ನಷ್ಟು ಓದಿರಿ

Scroll to Top