ಪೋನಿ ಚಂಡಮಾರುತಕ್ಕೆ ಒಳಗಾದ ಸಂತ್ರಸ್ತರಿಗೆ ಅಕ್ಷಯ್ ಒಂದು ಕೋಟಿ ಅನುದಾನ!

Picture of Cinibuzz

Cinibuzz

Bureau Report

ಸರ್ಕಾರ ಬರುತ್ತೋ ಇಲ್ವೋ ಅದು ಬೇರೆ ವಿಚಾರ. ಆದ್ರೆ ಕಷ್ಟ ಅಂತ ಬಂದ್ರೆ ಮೊದಲು ಬರೋದು ಸಿನಿಮಾ ಮಂದಿ. ಬಂದು ತಮ್ಮ ಕೈಲಾದ ಹಣವನ್ನೋ, ಸಂಬಂಧಪಟ್ಟ ವಸ್ತುಗಳನ್ನೋ ಸಂತ್ರಸ್ತರಿಗೆ ನೀಡಿ ಅವರ ಮೊಗದಲ್ಲಿ ನಗುವನ್ನು ಕಾಣುವ ತವಕದಲ್ಲಿ ಸದಾ ಇರುತ್ತಾರೆ. ಅಂದಹಾಗೆ ಇತ್ತೀಚಿಗೆ ಫೊನಿ ಚಂಡಮಾರುತದ ಕಾರಣ ತೀವ್ರ ಸಂಕಷ್ಟಕ್ಕೆ ತುತ್ತಾದ ಒಡಿಶಾಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರಿ ಪರಿಹಾರ ಧನ ನೀಡಿದ್ದಾರೆ. ಸುಮಾರು ಒಂದು ಕೋಟಿ ರೂಪಾಯಿಗಳನ್ನು ಒಡಿಶಾಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪರಿಹಾರ ನಿಧಿಗೆ ಕಳುಹಿಸಿದ್ದಾರೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ಅಕ್ಷಯ್ ಕುಮಾರ್ ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಈ ಹಿಂದೆ ಕೇರಳ, ಚೆನ್ನೈ ಚಂಡಮಾರುತ ಹೊಡೆತಕ್ಕೆ ತುತ್ತಾದಾಗಲೂ ಅಕ್ಷಯ್ ಸಹಾಯ ಹಸ್ತ ಚಾಚಿದ್ದರು. ಅಷ್ಟೇ ಅಲ್ಲ ಭಾರತ್ ಕೇ ವೀರ್ ವೆಬ್‍ಸೈಟ್ ಮೂಲಕ ಸೈನಿಕರ ಕುಟುಂಬಗಳಿಗೂ ಸಹಾಯ ಮಾಡುತ್ತಿದ್ದಾರೆ.

ಫೊನಿ ಚಂಡಮಾರುತದ ಕಾರಣ ಒಡಿಶಾದಲ್ಲಿ ಸುಮಾರು 34 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಆಸ್ತಿಪಾಸ್ತಿ ನಷ್ಟವಾಗಿದೆ. ಚಂಡಮಾರುತದ ಕಾರಣ ಅಪಾರ ಆಸ್ತಿ ನಷ್ಟವಾಗಿದ್ದು ಎಲ್ಲೆಡೆಯಿಂದ ಪರಿಹಾರ ಹರಿದು ಬರುತ್ತಿದೆ. ಫೊನಿ ಚಂಡಮಾರುತ ಪೀಡಿತ ಒಡಿಶಾದ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೈಮಾನಿಕ ಸಮೀಕ್ಷೆ ನಡೆಸಿದ್ದು, 1000 ಕೋಟಿ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಪ್ರಾಣ ಹಾಗೂ ಆಸ್ತಿ ಹಾನಿಯನ್ನು ಕನಿಷ್ಠ ಮಟ್ಟಕ್ಕಿಳಿಸಲು ಉಪಗ್ರಹಗಳು ಸೇರಿದಂತೆ ತಂತ್ರಜ್ಞಾನದ ಪಡೆದಿರುವುದನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top