ಕೃಷ್ಣನ್ ಲವ್ ಸ್ಟೋರಿಯಿಂದ ಕೃಷ್ಣ ಲೀಲಾವರೆಗೂ ಕೃಷ್ಣನ ಸಿರೀಸ್ ನಲ್ಲಿ ಪಡ್ಡೆ ಹೈಕಳ, ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾಗಳ ಮೂಲಕ ಮಿಂಚು ಸ್ಯಾಂಡಲ್ ವುಡ್ ನ ಲವರ್ ಬಾಯ್ ಅಜೇಯ್ ರಾವ್ ಮತ್ತೊಮ್ಮೆ ಕೃಷ್ಣನ ಗೆಟಪ್ ನಲ್ಲಿ ಮಿರ ಮಿರ ಮಿಂಚೋಕೆ ರೆಡಿಯಾಗುತ್ತಿದ್ದಾರೆ. ಹೌದು ಆನಂದ ಪ್ರಿಯಾ ಉರುಫ್ ವಿಜಯಾನಂದ್ ಆಕ್ಷನ್ ಕಟ್ ಹೇಳುತ್ತಿರುವ ಹೊಸ ಸಿನಿಮಾ ಸದ್ಯದಲ್ಲೇ ಸೆಟ್ಟೇರಲ್ಲಿದೆ. ಚಿತ್ರಕ್ಕೆ ಕೃಷ್ಣ ಟಾಕೀಸ್ ಎಂದೂ ಸಹ ಟೈಟಲ್ ಫೈನಲ್ ಮಾಡಲಾಗಿದೆ.

ಇದು ಕೂಡ ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಸಿನಿಮಾವಾಗಿರುವುದು ವಿಶೇಷವಾಗಿದೆ. ಕೃಷ್ಣನ ಟಾಕೀಸಿನಲ್ಲಿ ಇಬ್ಬರು ನಾಯಕಿಯರಿದ್ದೂ ಈಗಾಗಲೇ ಮೊದಲ ನಾಯಕಿಯಾಗಿ ಅಪೂರ್ವ ಆಯ್ಕೆಯಾಗಿದ್ದಾರೆ. ಇದೀಗ ಎರಡನೇ ನಾಯಕಿಯಾಗಿ ಸಿಂಧೂ ಲೋಕನಾಥ್ ಎಂಟ್ರಿ ಕೊಟ್ಟಿದ್ದಾರೆ. ಮದುವೆಯ ಬಳಿಕ ಮೊದಲ ಬಾರಿಗೆ ಸಿಂಧೂ ಎರಡನೇ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದಾರೆ. ಚಿತ್ರಕ್ಕೆ ಬಾಲ್ಕನಿ ಎಫ್ 13 ಎಂಬ ಟ್ಯಾಗ್ ಲೈನ್ ಇದೆ. ಇನ್ನು ಕೃಷ್ಣನಿಗೆ ಚಿಕ್ಕಣ್ಣ, ಮಂಡ್ಯ ರಮೇಶ್, ಪ್ರಮೋದ್ ಶೆಟ್ಟಿ ಸೇರಿದಂತೆ ಬಹುತೇಕ ತಾರೆಯರು ಬಣ್ಣ ಹಚ್ಚಲಿದ್ದಾರೆ. ಕೃಷ್ಣ ಟಾಕೀಸಿಗೆ ಶ್ರೀಧರ್ ಸಂಭ್ರಮ್ ಸಂಗೀತವಿದ್ದು, ರಂಗಿತರಂಗ ಖ್ಯಾತಿಯ ವಿಲಿಯಂ ಡೇವಿಡ್ ಕ್ಯಾಮೆರಾ ಕೈ ಚಳಕವಿರುವುದು ಚಿತ್ರಕ್ಕೆ ಪ್ಲಸ್ಸಾಗುವುದಾ ನೋಡಬೇಕು.











































