ಜಯತೀರ್ಥ ಕಾಶಿ ಯಾತ್ರೆ!

Picture of Cinibuzz

Cinibuzz

Bureau Report

ಒಲವೇ ಮಂದಾರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಾನು ಒಮ್ಮೆ ಸೃಜನಶೀಲ ನಿರ್ದೇಶಕನಿದ್ದೇನೆ ಎಂದು ತೋರಿಸಿಕೊಟ್ಟ ಜಯತೀರ್ಥ, ಸದ್ಯ ಬೆಲ್ ಬಾಟಂ ನಿರ್ದೇಶಿಸಿ, ಕಮರ್ಶಿಯಲ್ ಚಿತ್ರಗಳನ್ನೂ ಮಾಡುವ ತಾಕತ್ತು ತನಿಗಿದೆಯೆಂದು ತೋರಿಸಿಕೊಟ್ಟಿದ್ದಾರೆ. ಬೆಲ್ ಬಾಟ್ ನಂ ಸಕ್ಸಸ್ ನ ಅಲೆಯಲ್ಲಿ ತೇಲುತ್ತಿರುವಾಗಲೇ ಜಯತೀರ್ಥ ಕಾಶಿಗೆ ಯಾತ್ರೆ ಹೊರಟಿದ್ದಾರೆ. ಅರೇ… ಕಾಶಿ ಯಾತ್ರೇನಾ ಅಂತ ಆಶ್ಚರ್ಯ ಪಡಬೇಡಿ. ಅವರು ಕಾಶಿಗೆ ಪಾಪ ಕಳೆದುಕೊಳ್ಳಲು ಹೋಗುತ್ತಿಲ್ಲ. ಮೇಲಾಗಿ ಜಮೀರ್ ಪುತ್ರ ಜಾಹಿದ್ ಖಾನ್ ಸಿನಿಮಾದ ಕುರಿತಾದ ರಿಸರ್ಚ್ ಸಲುವಾಗಿ ಹೋಗಿದ್ದಾರೆ. ಹೌದು..ಕನ್ನಡದಲ್ಲಿ ಜಾಹಿದ್ ಖಾನ್ ಅವರ ಚೊಚ್ಚಲ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಜಯತೀರ್ಥ ಸಿನಿಮಾ ಕೆಲಸಕ್ಕಾಗಿ ಕಾಶಿ ಕಡೆ ಪಯಣ ಬೆಳೆಸಿದ್ದಾರಂತೆ.

ವಿಶೇಷವೆಂದರೆ ಜಾಹಿದ್ ಖಾನ್ ಚೊಚ್ಚಲ ಸಿನಿಮಾದ ಕಥೆಗೂ ಕಾಶಿಗೂ ಯಾವುದೋ ಲಿಂಕ್ ಇರುವುದುದರಿಂದ ಅದನ್ನು ಹೆಕ್ಕಿ ತರುವುದಕ್ಕಾಗಿ ಈ ಟ್ರಿಪ್ಪು. ಜಯತೀರ್ಥ ತಮ್ಮ ಸಿನಿಮಾಗಳಲ್ಲಿ ಏನಾದರೊಂದು ವಿಶೇಷತೆಯನ್ನೋ, ಸ್ಪೆಷಲ್ ಎಲಿಮೆಂಟನ್ನೋ ಸೇರಿಸಿ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅದನ್ನು ಈಗಾಗಲೇ ಫ್ರೂವ್ ಮಾಡಿದ್ದಾರೆ ಕೂಡ. ಜಯತೀರ್ಥ ತಮ್ಮ ಹೊಸ ಸಿನಿಮಾದಲ್ಲೂ ಅಂತಹುದೇ ಯಾವುದೋ ವಿಶೇಷತೆಯನ್ನು ಸೇರಿಸುವ ಸಲುವಾಗಿ ಕಾಶಿಯಲ್ಲಿ ಬೀಡು ಬಿಟ್ಟಿದ್ದು, ಒಂದು ವಾರಗಳ ಕಾಲ ಅಲ್ಲೇ ತಂಗಲಿದ್ದಾರಂತೆ. ಅಲ್ಲಿನ ವಾತಾವರಣಕ್ಕನುಗುಣವಾಗಿ ಚಿತ್ರಕತೆ ಸಿದ್ಧವಾಗಲಿದ್ದು, ಈಗಾಗಲೇ ಜಾಹಿದ್ ಕೂಡ ಸಿನಿಮಾಕ್ಕಾಗಿ ಪೂರ್ವ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.

ಜಾಹಿದ್ ಸಿನಿಮಾದ ಫ್ರೀ ಪ್ರೊಡಕ್ಷನ್ ಕೆಲಸಗಳು ಸದ್ಯ ನಡೆಯುತ್ತಿದ್ದು, ಚಿತ್ರದ ಟೈಟಲ್ ಮತ್ತು ಉಳಿದ ಕಲಾವಿದರ ಆಯ್ಕೆಯ ಕುರಿತಾಗಿ ಅಧಿಕೃತ ಮಾಹಿತಿಗಳು ಸದ್ಯದಲ್ಲೇ ಹೊರಬೀಳಲಿದೆ.

ಇನ್ನಷ್ಟು ಓದಿರಿ

Scroll to Top