ಜುಲೈ ಮೊದಲವಾರಕ್ಕೆ ಕಥಾಸಂಗಮ ರಿಲೀಸ್!

Picture of Cinibuzz

Cinibuzz

Bureau Report

ಸದಭಿರುಚಿಯ ಸಿನಿಮಾಗಳನ್ನು ಮಾಡುತ್ತಲೇ ಸೈ ಎನ್ನಿಸಿಕೊಂಡು ಸ್ಯಾಂಡಲ್ ವುಡ್ ನ ಭರವಸೆಯ ನಿರ್ದೇಶಕ ಕಮ್ ನಾಯಕನಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಇದೀಗ ಕಥಾಸಂಗಮ ಸಿನಿಮಾದ ಮೂಲಕ ಮತ್ತೊಮ್ಮೆ ತೆರೆ ಮೇಲೆ ಬರೋಕೆ ರೆಡಿಯಾಗಿದ್ದಾರೆ.

ಚಿತ್ರದ ಟೈಟಲ್ ಕೇಳಿದಾಕ್ಷಣ ಪುಟ್ಟಣ್ಣ ಕಣಗಾಲ್ ಅವರ ಕಥಾಸಂಗಮವೇ ನೆನಪಿಸುವ ರಿಷಬ್ ಶೆಟ್ಟಿಯ ಕಥಾಸಂಗಮ ಜುಲೈ ಮೊದಲ ವಾರದಲ್ಲಿ ರಿಲೀಸ್ ಭಾಗ್ಯ ಕಾಣಲಿದೆ. ಕಥಾಸಂಗಮದಲ್ಲಿ ಏಳು ಕಥೆಗಳಿದ್ದು, ಏಳು ನಿರ್ದೇಶಕರನ್ನು ಒಳಗೊಂಡಿರುವ ವೈಶಿಷ್ಟ್ಯವಿದೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಹರಿಪ್ರಿಯಾ, ಪ್ರಕಾಶ್ ಬೆಳವಾಡಿ, ಕಿಶೋರ್, ಯಜ್ಞಾಶೆಟ್ಟಿ ಸೇರಿದಂತೆ ಬಹುದೊಡ್ಡ ತಾರಾಂಗಣವೇ ಇದೆ.

ಇನ್ನಷ್ಟು ಓದಿರಿ

Scroll to Top