ಠೇವಣಿ ಕಳೆದುಕೊಂಡ ನಟ ಪ್ರಕಾಶ್ ರಾಜ್!

Picture of Cinibuzz

Cinibuzz

Bureau Report

ಲೋಕಸಭಾ ಚುನಾವಣೆಯ ಬಿಸಿಯನ್ನು ತಣಿಸುವ ಸಲುವಾಗಿ ಮಳೆರಾಯ ಬೆಂಗಳೂರನ್ನು ಕೆಲವೆಡೆ ತೊಯ್ಯುತ್ತಿದ್ದಾರೆ. ಈ ನಡುವೆ ಬೆಂಗಳೂರಿನ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ತೀವ್ರ ಮುಖವನ್ನು ಎದುರಿಸುವಂತಾಗಿದೆ. ಹೌದು ಚುನಾವಣೆಯಲ್ಲಿ ಸೋತು ಠೇವಣಿಯನ್ನು ಕಳೆದುಕೊಂಡಿರುವ ಪ್ರಕಾಶ್ ರಾಜ್ ಈಗಾಗಲೇ ಟ್ರೋಲಿಗರು, ವಿರೋಧಿಗಳ ಕಮೆಂಟುಗಳಿಗೆ, ಕಿಂಡಲ್ಲುಗಳಿಗೆ ಕಿವಿಗೊಡುವಂತಾಗಿದೆ. ಕಾಂಗ್ರೆಸ್ ನ ರಿಜ್ವಾನ್ ಹರ್ಷದ್ ಮತ್ತು ಬಿಜೆಪಿಯ ಪಿಸಿ ಮೋಹನ್ ಗೆ ನೇರ ಸ್ಪರ್ಧೆಯನ್ನು ನೀಡಿದ್ದ ಅವರ ನಿರೀಕ್ಷೆಗಳಿಗೆ ಬಲವಿಲ್ಲದಂತಾಗಿದೆ. ಈ ಕುರಿತು ಬೇಸರದಲ್ಲಿಯೇ ಟ್ವೀಟ್ ಸಹ ಮಾಡಿದ್ದಾರೆ.

“ಈ ಫಲಿತಾಂಶ ನನ್ನ ಕಪಾಳಕ್ಕೆ ಜೋರಾಗಿ ಬಡಿದಂತಾಗಿದೆ. ಅಸೂಯೆ, ಟ್ರೋಲ್ ಗಳು ಮಾತ್ರ ನನ್ನ ದಾರಿಗೆ ಬಂದಿವೆ. ಆದರೆ ನಾನು ನನ್ನ ಜಾಗದಲ್ಲಿಯೇ ನಿಲ್ಲುತ್ತೇನೆ. ಜಾತ್ಯಾತೀತ ಭಾರತಕ್ಕೆ ನನ್ನ ಹೋರಾಟವನ್ನು ಮಂದುವರೆಸುತ್ತೇನೆ. ಇದು ಆರಂಭ ಮಾತ್ರ. ನಾನು ಆರಿಸಿಕೊಂಡ ದಾರಿ ಬಹಳಷ್ಟು ಕಠಿಣವಾಗಿದೆ ಎಂದಿದ್ದಾರೆ. ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ಸಹ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top