ಎಲೆಕ್ಷನ್ ನಂತರ ಪ್ರಜಾಸೇವಕನ ಫಸ್ಟ್ ರಿಯಾಕ್ಷನ್!

Picture of Cinibuzz

Cinibuzz

Bureau Report

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಇತರರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗಿದ್ದರೆ ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಸೂಪರ್ ಸ್ಟಾರ್ ಉಪೇಂದ್ರ ತಮ್ಮ ಯುಪಿಪಿ ಮೂಲಕ ಸುದ್ದಿಯಾಗೋಕೆ ಬಹಳಷ್ಟು ಶ್ರಮಪಟ್ಟಿದ್ದರು. ಆದರೆ ಮೋದಿ ಅಲೆಗೋ! ಅಥವಾ ಉಪ್ಪಿಯ ಚಿಂತನೆ ಜನತೆಗೆ ಮುಟ್ಟದ ಕಾರಣಕ್ಕೋ ಯುಪಿಪಿಯಿಂದ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಹೀನಾಯ ಸೋಲಿನ ಜತೆಗೆ ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದಾರೆ.

https://twitter.com/nimmaupendra/status/1131550932452368384

ಇನ್ನು ಚುನಾವಣೆ ಭರ್ಜರಿ ಫಲಿತಾಂಶದ ನಂತರ  ಮೊದಲ ಟ್ವೀಟ್ ಮಾಡಿರುವ ಉಪೇಂದ್ರ ”ತಾವೇ ನಾಯಕರಾಗಲು ಬಯಸಿ ಉತ್ತಮ ಪ್ರಜಾಕೀಯ ಪಕ್ಷದ ಕಾರ್ಮಿಕರಿಗೆ ಮತ ಚಲಾಯಿಸಿದ, ಬೆಂಬಲಿಸಿದ, ಭಾಗವಹಿಸಿದ ಪ್ರತಿಯೊಬ್ಬರಿಗೂ ವಂದನೆಗಳು. ಸಂಪೂರ್ಣ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ನೀಡಿದ ಒಂದೊಂದು ಮತವೂ ಬಹಳ ಅಮೂಲ್ಯವಾದದ್ದು. ಪ್ರಜಾಕೀಯದ ವಿಚಾರಗಳು, ಪ್ರಯತ್ನ ಹೀಗೆ ಸಾಗುತ್ತಿರಲಿ. ಸಂಪೂರ್ಣ ಪ್ರಜಾಪ್ರಭುತ್ವ ನಮ್ಮೆಲ್ಲರ‌ ಹಕ್ಕು.” ಎಂದು ಬರೆದುಕೊಂಡಿದ್ದಾರೆ.

https://twitter.com/nimmaupendra/status/1131562564037464064

ಯಾವುದೇ ಕ್ಷೇತ್ರದಿಂದ ಗೆಲ್ಲದಿದ್ದರೂ ಸಹ ತಮಗೆ ನೀಡಿದ ಪ್ರತಿ ಮತವೂ ಕೂಡ ಅಮೂಲ್ಯವಾದದ್ದು, ಎಂದು ತಮ್ಮ ಪಕ್ಷಕ್ಕೆ ಮತ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ತಮ್ಮ ಮತ್ತೊಂದು ಟ್ವೀಟ್ ಮೂಲಕ ”ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿಯೂಬ್ಬ ಪ್ರಜಾ ಪ್ರತಿನಿಧಿಗಳಿಗೆ ಹಾಗೂ ಸ್ಪಷ್ಟ ಆದೇಶ ನೀಡಿದ ಪ್ರಜಾಪ್ರಭುಗಳಿಗೆ ಶುಭಾಷಯಗಳು” ಎಂದು ವಿಶ್ ಮಾಡಿದ್ದಾರೆ.

 

ಇನ್ನಷ್ಟು ಓದಿರಿ

Scroll to Top