ವಿನಯ್ ರಾಜಕುಮಾರ್ ಗೆ ರವಿ ಬಸ್ರೂರು ಆ್ಯಕ್ಷನ್ ಕಟ್!

Picture of Cinibuzz

Cinibuzz

Bureau Report

ಕನ್ನಡದ ಬಹುತೇಕ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಿಗೆ ಸಂಗೀತ ಸಂಯೋಜನೆಯನ್ನು ಮಾಡುವ ಮೂಲಕ ಕನ್ನಡಿಗರ ಹೃದಯ ಸಿಂಹಾಸನವನ್ನು ಅಲಂಕರಿಸಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು ಈಗ ದೊಡ್ಮನೆ ಮೊಮ್ಮಗ ವಿನಯ್ ರಾಜ್ ಕುಮಾರ್ ಗೆ ಆ್ಯಕ್ಷನ್ ಕಟ್ ಹೇಳುವ ತಯಾರಿಯಲ್ಲಿದ್ದಾರೆ.

ಪಕ್ಕಾ ಮಾಸ್ ಎಂಟರ್ ಟೈನರ್ ಆಗಿರುವ ಈ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಪ್ತ ಎನ್. ಎಸ್. ರಾಜ್ ಕುಮಾರ್ ಹಣ ಹೂಡುತ್ತಿದ್ದಾರಂತೆ. 2020ರ ವೇಳೆಗೆ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆಯಂತೆ.  ಸದ್ಯಕ್ಕೆ ರವಿ ಬಸ್ರೂರು ಒನ್ ಲೈನ್ ಸ್ಟೋರಿಯನ್ನಷ್ಟೇ ವಿನಯ್ ಕುಟುಂಬಕ್ಕೆ ಹೇಳಿದ್ದು, ಸ್ಕ್ರಿಪ್ಟ್ ಕೆಲಸ ಇನ್ನು ಆರಂಭಿಸಬೇಕಿದೆಯಂತೆ.

ಇನ್ನಷ್ಟು ಓದಿರಿ

Scroll to Top