ನವನವೀನವಾಗಿ ಬರಲಿದೆ ಮತ್ತೆ ಉದ್ಬವ!

Picture of Cinibuzz

Cinibuzz

Bureau Report

1990ರ ದಶಕದಲ್ಲಿ ಕೂಡ್ಲು ರಾಮಕೃಷ್ಣ ಅವರು ಆಕ್ಷನ್ ಕಟ್ ಹೇಳಿದ್ದ ಚಿತ್ರ ಉದ್ಭವ. ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಸೂಪರ್ ಹಿಟ್ ಕೂಡ ಆಗಿತ್ತು. ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಕೂಡ್ಲು ರಾಮಕೃಷ್ಣ ಮತ್ತೊಮ್ಮೆ ಉದ್ಭವ ಸಿನಿಮಾವನ್ನು ನಿರ್ಮಿಸಲು ರೆಡಿಯಾಗಿದ್ದಾರೆ.

ಹೌದು ಅದೇ ಚಿತ್ರದ ಎಳೆಯನ್ನಿಟ್ಟುಕೊಂಡು ಹೊಸ ಉದ್ಭವವನ್ನು ಮಾಡುತ್ತಿದ್ದಾರೆ. ಇನ್ನು ಹೊಸ ಉದ್ಭವದಲ್ಲಿ ಗೀತಾ ಬ್ಯಾಂಗಲ್ಸ್ ಸ್ಟೋರ್ ಖ್ಯಾತಿಯ ಪ್ರಮೋದ್ ಮತ್ತು ಬೃಂದಾವನ ಖ್ಯಾತಿಯ ಮಿಲನ ನಾಗರಾಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಉಳಿದಂತೆ ಅನಂತ್ ನಾಗ್ ನಟಿಸಿದ್ದ ಪಾತ್ರವನ್ನು ರಂಗಾಯಣ ರಘು ನಟಿಸಿದ್ದಾರೆ. ಪವನ್ ಒಡೆಯರ್ ಪತ್ನಿ ಅಪೇಕ್ಷ ಪುರೋಹಿತ್ ಸಹ ಚಿತ್ರದಲ್ಲಿದ್ದಾರೆ.  ಇದೇ ತಿಂಗಳ 6 ರಿಂದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

ಇನ್ನಷ್ಟು ಓದಿರಿ

Scroll to Top