ಎವರ್ ಗ್ರೀನ್ ಅಪ್ಸರೆಗೆ ಅಂತರಾಷ್ಟ್ರೀಯ ಪುರಸ್ಕಾರ!

Picture of Cinibuzz

Cinibuzz

Bureau Report

ಕನ್ನಡದ ಖ್ಯಾತ ನಟಿ ಸುಧಾರಾಣಿಯವರಿಗೆ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪುರಸ್ಕಾರ ದೊರಕಿದೆ. ಕನ್ನಡ ಚಿತ್ರರಂಗದಲ್ಲಿ ನಟಿ ಸುಧಾರಾಣಿ ಸಲ್ಲಿಸಿದ ಸೇವೆಯನ್ನಾಧರಿಸಿ ಈ ಪ್ರಶಸ್ತಿ ಪ್ರಧಾನ ಮಾಡಲಿದೆ. ಸುಧಾರಾಣಿ ತಾವು ಪ್ರಶಸ್ತಿ ಸ್ವೀಕರಿಸಿದ ಅಮೂಲ್ಯ ಕ್ಷಣಗಳನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ.

https://www.instagram.com/p/ByM5IdbHoyu/?utm_source=ig_web_copy_link

“ಅತ್ಯಂತ ಹಳೆಯ ಪಾರಂಪರಿಕ ಪ್ರಶಸ್ತಿಯಲ್ಲಿ ಒಂದಾಗಿರುವ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕಾಗಿ ಹೆಮ್ಮೆ ಎನಿಸಿದೆ. ಕನ್ನಡ ಚಿತ್ರರಂಗಕ್ಕೆ ನನ್ನ ಸೇವೆಗಾಗಿ ಈ ಪ್ರಶಸ್ತಿ ಲಭಿಸಿದೆ” ಸುಧಾರಾಣಿ ಬರೆದುಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ “ಆನಂದ್” ಮೂಲಕ ಚಿತ್ರ್ರಂಗ ಪ್ರವೇಶಿಸಿದ್ದ ಸುಧಾರಾಣಿ  ರಣರಂಗ, ಕೃಷ್ಣ ನೀ ಕುಣಿದಾಗ, ಪಂಚಮ ವೇದ, ಮೈಸೂರು ಮಲ್ಲಿಗೆ, ಮಣ್ಣಿನ ದೋಣಿ ಇತ್ಯಾದಿ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಇನ್ನಷ್ಟು ಓದಿರಿ

Scroll to Top