ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಬ್ಯುಸಿಯ ನಡುವೆಯೂ ರಮೇಶ್ ಅರವಿಂದ ಶಿವಾಜಿ ಸುರತ್ಕಲ್ ಸಿನಿಮಾದ ಮೂಲಕ ಬೆಳ್ಳಿ ಪರದೆಗೆ ಕಮ್ ಬ್ಯಾಕ್ ಆಗಿದ್ದಾರೆ. ಚಿತ್ರದಲ್ಲಿ ಸಿನಿಮಾದಲ್ಲಿ ಮೈಸೂರು ಎಸಿಪಿ ಕ್ರೈಮ್ ಬ್ರಾಂಚಿನ ಪತ್ತೇದಾರಿ ಮತ್ತು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಮೇಶ್ ಕಾಣಿಸಿಕೊಂಡಿದ್ದು, ರಾಧಿಕಾ ಚೇತನ್ ಹೆಂಡತಿ ಜನನಿ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇತ್ತೀಚೆಗಷ್ಟೇ ಚಿತ್ರ ತಂಡ ರಮೇಶ್ ಅರವಿಂದ್ ಹಾಗೂ ರಾಧಿಕಾ ಚೇತನ್ ರ ಕಾಂಬಿನೇಶನ್ನಿನ ಹಾಡೊಂದರ ಚಿತ್ರೀಕರಣವನ್ನು ಮುಗಿಸಿದೆ. ಮೈಸೂರಿನ ತಾಣಗಳಾದ ಚಾಮುಂಡೇಶ್ವರಿ ದೇವಾಲಯ, ಮೈಸೂರು ಅರಮನೆ, ಕೆ.ಆರ್.ಸರ್ಕಲ್ ಹೀಗೆ ಸುಮಾರು ಜನಪ್ರಿಯ ತಾಣಗಳನ್ನು ಸಾಂಗಿನಲ್ಲಿ ಸೆರೆಹಿಡಿಯಲಾಗಿದೆಯಂತೆ. ಜಯಂತ್ ಕಾಯ್ಕಿಣಿಯ ಸಾಹಿತ್ಯ ಈ ಹಾಡಿಗಿದ್ದು, ಜೂಡಾ ಸ್ಯಾಂಡಿ ಸಂಯೋಜಿಸಿದ್ದಾರೆ.











































