ರೀ ಓಪನ್ ಆಗಲಿದೆ ಸಿಂಪಲ್ ಸ್ಟಾರ್ ನ ಸೋಶಿಯಲ್ ಖಾತೆಗಳು!

Picture of Cinibuzz

Cinibuzz

Bureau Report

ಸ್ಯಾಂಡಲ್ ವುಡ್ ನ ನಾರಾಯಣ ರಕ್ಷಿತ್ ಶೆಟ್ಟಿ ಸುದ್ದಿಯಲ್ಲಿದ್ದಾರೆ. ಕೆಲವು ತಿಂಗಳುಗಳಿಂದ ಸದ್ದಿಲ್ಲದೇ ಸೈಲೆಂಟ್ ಆಗಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಸಿಂಪಲ್ ಸ್ಟಾರ್ ಈಗ ಅಭಿಮಾನಿಗಳಿಗೊಂದು ಖುಷಿ ವಿಚಾರವನ್ನು ಶೇರ್ ಮಾಡಿದ್ದಾರೆ. ಹೌದು, ಅವನೇ ಶ್ರೀಮನ್ನಾರಾಯಣ ರಿಲೀಸ್ ಗೆ ಎದುರು ನೋಡುತ್ತಿರುವ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾಕ್ಕೂ ಕಮ್ ಬ್ಯಾಕ್ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸುಮಾರು ವರ್ಷದಿಂದ ಅಭಿಮಾನಿಗಳ ಕೈಗೆ ಸಿಗದೆ ದೂರ ಉಳಿದಿದ್ದ ರಕ್ಷಿತ್ ಇನ್ನು ಮುಂದೆ ಅಭಿಮಾನಿಗಳ ಜೊತೆ ಇಂಟರ್ಯಾಕ್ಟ್ ಮಾಡಲಿದ್ದಾರೆ.

ಇದೇ ತಿಂಗಳು ಜೂನ್ 6ಕ್ಕೆ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬವಿದೆ. ಅದರ ಪ್ರಯುಕ್ತ ಅಭಿಮಾನಿಗಳಿಗೆ ಸಾಕಷ್ಟು ಗಿಫ್ಟ್ ಗಳು ಕಾದಿದ್ದು, ಹೊಸ ಸಿನಿಮಾಗಳ ಘೋಷಣೆ, ಟ್ರೇಲರ್, ಟೀಸರ್, ಫಸ್ಟ್ ಲುಕ್ ರಿಲೀಸ್ ಆಗಬಹುದಾದ ಸಾಧ್ಯತೆಗಳಿವೆ. ಈ ಹಿಂದೆಯೂ ಸೋಶಿಯಲ್ ಮೀಡಿಯಾದ ಖಾತೆಗಳನ್ನು ಹ್ಯಾಂಡಲ್ ಮಾಡುತ್ತಿದ್ದರು. ಆದರೆ ವೈಯಕ್ತಿಕ ಜೀವನದಲ್ಲಾದ ಏರುಪೇರುಗಳು, ಟ್ರೋಲುಗಳು, ಕಮೆಂಟುಗಳಿಗೆ ಬೇಸತ್ತಿದ್ದ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾದಿಂದ ದೂರ ಉಳಿಯುವ ಯೋಚನೆಯನ್ನು ಮಾಡಿದ್ದರು. ಆದರೀಗ ಮತ್ತೆ ಗೂಡಿಗೆ ಮರಳುವ ಯೋಚನೆ ಮಾಡಿದ್ದಾರೆ. ಈ ಬಾರಿ ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಅವರ ಹ್ಯಾಂಡಲ್ ಮಾಡದೇ ಅವರ ಟೀಮ್ ಹ್ಯಾಂಡಲ್ ಮಾಡಲಿದೆ.

ಇನ್ನಷ್ಟು ಓದಿರಿ

Scroll to Top