ಸೆಟ್ಟೇರಿತು ಕೋಡ್ಲು ನಿರ್ದೇಶನದ ಮತ್ತೆ ಉದ್ಭವ!

Picture of Cinibuzz

Cinibuzz

Bureau Report

1990ರಲ್ಲಿ  ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಉದ್ಭವ ಸಿನಿಮಾದ ಸೀಕ್ವೆನ್ಸ್ ಮತ್ತೊಂದು ಸಿನಿಮಾ 2019ರಲ್ಲಿ ಸೆಟ್ಟೇರಿದೆ. ಅದಕ್ಕೆ ಮತ್ತೆ ಉದ್ಭವ ಎಂಬ ಟೈಟಲನ್ನು ಇಡಲಾಗಿದೆ. ಎರಡೂ ಚಿತ್ರಕ್ಕೂ ಕತೆ ಬರೆದಿರುವ  ನಿರ್ದೇಶಕ ಕೋಡ್ಲು ರಾಮಕೃಷ್ಣ ಹೇಳುವಂತೆ ಎಲ್ಲೆ ಹೋದರೂ ಇದೇ ಚಿತ್ರದ ಕುರಿತಂತೆ ಕೇಳುತ್ತಿದ್ದರು. ಅದಕ್ಕಾಗಿಯೇ ಮತ್ತೊಮ್ಮೆ ಅದೇ ಸಿನಿಮಾವನ್ನು ಕನ್ಟ್ರಕ್ಟ್ ಮಾಡಿ ಮಾಡಬೇಕಾಯಿತು. ಅನಂತ್‌ನಾಗ್ ಡೇಟ್ ಹೊಂದಾಣಿಕೆಯಾಗದ ಕಾರಣದಿಂದ ಆ ಪಾತ್ರಕ್ಕೆ ರಂಗಾಯಣ ರಘು ಬಂದಿದ್ದಾರೆ. ಆ ಉದ್ಭವ ಕ್ಲಾಸ್ ಅಗಿತ್ತು. ಇದರಲ್ಲಿ ಡ್ಯಾನ್ಸ್, ಫೈಟು, ಕಾಮಿಡಿ ಇರುವುದರಿಂದ ಮಾಸ್ ಎನ್ನಬಹುದು. ಪಾತ್ರಗಳನ್ನು ಹಾಗೆಯೇ ಉಳಿಸಿಕೊಂಡು ಕಲಾವಿದರನ್ನು ಬದಲಾವಣೆ ಮಾಡಿಕೊಳ್ಳಲಾಗಿದೆ. ಮೊದಲ ಭಾಗದಲ್ಲಿ ದೇವರನ್ನು ತೋರಿಸಲಾಗಿ,  ಎರಡನೆಯದರಲ್ಲಿ ದೇವರಿಗಿಂತ ದೊಡ್ಡದು ಉಧ್ಭವವಾಗುತ್ತೆ. ಅದು ಏನು ಎಂಬುದನ್ನು ಚಿತ್ರಮಂದಿರದಲ್ಲಿ ನೋಡಬೇಕು.

ಹಿರಿಯ ಮಗನ ಪಾತ್ರದಲ್ಲಿ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್, ಕಿರಿಯ ಮಗನಾಗಿ ಮಂಡ್ಯ ರವಿ ನಟಿಸಿದ್ದಾರೆ. ನಾಯಕಿಯಾಗಿ ಮಿಲನ ನಾಗರಾಜ್, ಶೃಂಗಾರ ಸ್ವಾಮೀಜಿಯಾಗಿ ಮೋಹನ್ ಬಣ್ಣ ಹಚ್ಚುವುದರ ಜತೆಗೆ ಸಂಭಾಷಣೆಯನ್ನು ಬರೆಯುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇವರ ಆಪ್ತ ಭಕ್ಷೆಯಾಗಿ ಶುಭರಕ್ಷಾ ನಟನೆ ಚಿತ್ರದಲ್ಲಿದೆ. ಉಳಿದಂತೆ  ಸುಧಾ ಬೆಳವಾಡಿ, ಅವಿನಾಶ್, ಪಿ.ಡಿ.ಸತೀಶ್, ಗಿರೀಶ್‌ ಭಟ್, ಚೇತನ್‌ ಚಮನ್, ನರೇಶ್, ಶಂಕರ್‌ ಅಶ್ವಥ್, ನಿರಂಜನ್ ನಟಿಸುತ್ತಿದ್ದಾರೆ. ಜಯಂತ್‌ ಕಾಯ್ಕಣಿ-ಪ್ರಹ್ಲಾದ್ ಸಾಹಿತ್ಯದ ಮೂರು ಗೀತೆಗಳಿಗೆ ವಿ.ಮನೋಹರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಮೋಹನ್, ಸಂಕಲನ ಕೆಂಪರಾಜು, ಸಾಹಸ ಥ್ರಿಲ್ಲರ್‌ ಮಂಜು, ನೃತ್ಯ ತ್ರಿಭುವನ್ ನಿರ್ವಹಿಸುತ್ತಿದ್ದಾರೆ. ನಟಿ ಅಪೇಕ್ಷಾ ಪುರೋಹಿತ್ ಚೊಚ್ಚಲಬಾರಿಗೆ ಮತ್ತೆ ಉದ್ಭವ ಮೂಲಕ ಕಾಸ್ಟ್ಯೂಮ್ ಡಿಸೈನರ್ ಆಗಿ ತೆರೆ ಹಿಂದೆ ಕೆಲಸ  ಮಾಡುತ್ತಿದ್ದಾರೆ.

 

 

ಇನ್ನಷ್ಟು ಓದಿರಿ

Scroll to Top