ಕೂದಲೆಳೆಯಲ್ಲಿ ಸಾವಿನ ದವಡೆಯಿಂದ ಪಾರಾದ ಮಲಯಾಳಂ ನಟಿ!

Picture of Cinibuzz

Cinibuzz

Bureau Report

ಮಲಯಾಳಂ ನಟಿ ಅರ್ಚನ ಕವಿ ಮತ್ತು ಕುಟುಂಬಸ್ಥರು ಸ್ವಲ್ಪದರಲ್ಲೇ ಸಾವಿನಂಚಿನಿಂದ ಪಾರಾಗಿದ್ದಾರೆ. ಹೌದು ಇತ್ತೀಚಿಗೆ ಮೆಟ್ರೋ ಫಿಲ್ಲರ್ ಕಾಮಗಾರಿಯ ಬಳಿ ಕಾರು ಚಲಾಯಿಸುತ್ತಿದ್ದಾಗ ಚಪ್ಪಡಿ ಕಲ್ಲೊಂದು ಕಾರಿನ ಫ್ರಂಟ್ ಗ್ಲಾಸಿನ ಮೇಲೆ ಬಿದ್ದಿದೆ. ಅಚಾನಕ್ಕಾಗಿ ಮುಂದಾಗಬಹುದಾದ ಅವಘಡದಿಂದ ಅರ್ಚನ ಮತ್ತು ಕುಟುಂಬ ಕೂದಲೆಳೆಯಲ್ಲಿ ಪಾರಾಗಿದ್ದಾರೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸ್ವತಃ ಅರ್ಚನಾ ಅವರೇ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಲ್ಲದೇ ಕೊಚ್ಚಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ ಮತ್ತು ಮೆಟ್ರೋ ಅಧಿಕಾರಿಗಳಿಗೂ ದೂರು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮೆಟ್ರೋ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದ್ದಾರೆ. ಅಲ್ಲದೇ ಕಾರಿನ ಡ್ಯಾಮೇಜಿಗೆ ತಗುಲಬಹುದಾದ ಖರ್ಚು ವೆಚ್ಚವನ್ನು ಬರಿಸುವುದಾಗಿಯೂ ತಿಳಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top