ದರ್ಶನ್ ಮನೆ ಮುಂದೆ ಬಿದ್ದ ಮರ ತೆರವು ಗೊಳಿಸದ ಬಿಬಿಎಂಪಿ!

Picture of Cinibuzz

Cinibuzz

Bureau Report

ಕೆಲವು ದಿನಗಳ ಹಿಂದೆ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಬಿಟ್ಟು ಬಿಡದೇ ಮಳೆಯಾಗಿತ್ತು. ಪರಿಣಾಮವಾಗಿ ಸಾಕಷ್ಟು ಕಡೆ ಮರಗಳು ತುಂಡಾಗಿ ನೆಲಕ್ಕುರುಳಿದ್ದವು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆಯೂ ಮೂರು ದಿನಗಳ ಹಿಂದೆಯೇ ಮರವೊಂದು ಬಿದ್ದಿದೆ.

ಮೂರು ದಿನಗಳಾದರೂ ಮನೆ ಮುಂದೆ ಬಿದ್ದ ಮರವನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸದೇ ಬೇಜವಾಬ್ದಾರಿ ತೋರಿದ್ದಾರೆ. ಮಳೆಯ ರಭಸಕ್ಕೆ ಮರ ಮುರಿದು ದರ್ಶನ್ ಮನೆ ಕಾಂಪೌಂಡ್ ಮೇಲೆ ಬಿದ್ದಿದ್ದು, ವಾಹನ ಹೊರ ತೆಗೆಯುವುದಕ್ಕೂ ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಿದೆ. ಸೆಲೆಬ್ರೆಟಿಗಳ ವಿಚಾರವನ್ನೇ ಇಷ್ಟು ಕೇರ್ ಲೆಸ್ ಮಾಡುವ ಅಧಿಕಾರಿಗಳು ಇನ್ನು ಕಾಮನ್ ಪೀಪರ್ ಗಳ ಅಳಲನ್ನು ಎಷ್ಟರಮಟ್ಟಿಗೆ ಕೇಳಬಲ್ಲರು. ನಿವಾರಿಸಬಲ್ಲರು.

ಇನ್ನಷ್ಟು ಓದಿರಿ

Scroll to Top