ಗಿರೀಶ್ ಕಾರ್ನಾಡ್ ನಿಧನಕ್ಕೆ ಪ್ರಧಾನಿ ಸಂತಾಪ!

Picture of Cinibuzz

Cinibuzz

Bureau Report

ಇಂದು ಮುಂಜಾನೆ ನಿಧನರಾದ ಹಿರಿಯ ಸಾಹಿತಿ, ನಟ, ರಂಗಭೂಮಿ ಕಲಾವಿದ ನಿರ್ದೆಶಕ ಗಿರೀಶ್ ಕಾರ್ನಾಟ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಎಲ್ಲ ರಂಗದಲ್ಲಿಯೂ ತೊಡಗಿಸಿಕೊಂಡಿದ್ದ ಗಿರೀಶ್ ಕಾರ್ನಾಡ್ ಅವರನ್ನು ಅವರ ಬಹುಮುಖಿ ಪ್ರತಿಭೆಯಾಗಿ ಸ್ಮರಿಸಿಕೊಳ್ಳುತ್ತೇವೆ. ತಮಗೆ ಆಪ್ತವಾದ ವಿಚಾರಗಳ ಬಗ್ಗೆ ಅವರು ಅತ್ಯಂತ ಉತ್ಕಟತೆಯಿಂದ, ನಿಷ್ಠೂರವಾಗಿ ಮಾತನಾಡುತ್ತಿದ್ದರು. ಅವರು ಮಾಡಿದಂತಹ ಕೆಲಸಗಳು ಮಾಸಿ ಹೋದರೂ ಸಹ ಕಳೆದರೂ ಜನಪ್ರಿಯವಾಗಿಯೇ ಉಳಿದಿರುತ್ತವೆ. ಅವರ ಸಾವಿನಿಂದ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top