ಅಂತಿಮ ದರ್ಶನಕ್ಕೆ ಮನೆಯ ಬಳಿ ಬರಬೇಡಿ: ಗಿರೀಶ್ ಕಾರ್ನಾಡ್ ಪುತ್ರ

Picture of Cinibuzz

Cinibuzz

Bureau Report

ಇಂದು ಬೆಳಿಗ್ಗೆ ನಿಧನರಾದ ಗಿರೀಶ್ ಕಾರ್ನಾಡ್ ಅವರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ. ಆದರೆ ಅಂತ್ರಕ್ರಿಯೆ ಮತ್ತು ಅಂತಿಮ ದರ್ಶನಕ್ಕೆ ಯಾರು ಬರಬೇಡಿ ಎಂದು ಗಿರೀಶ್ ಕಾರ್ನಾಡ್ ಅವರ ಪುತ್ರ ತಿಳಿಸಿದ್ದಾರೆ.

ಲಾವೆಲ್ಲಾ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಬಳಿ ಮಾತನಾಡಿದ ಅವರು, ಗಣ್ಯರು ಯಾರು ಮೃತದೇಹದ ವೀಕ್ಷಣೆಗೆ ಬರಬೇಡಿ, ಯಾವುದೇ ಸರ್ಕಾರಿ ಗೌರವದ ಅಗತ್ಯವಿಲ್ಲ. ಮಧ್ಯಾಹ್ನದ ಮೇಲೆ ಬೈಯಪ್ಪನಹಳ್ಳಿ ಸಮೀಪ ಅಂತ್ಯ ಸಂಸ್ಕಾರ ನಡೆಯುತ್ತದೆ. ಯಾವುದೇ ವಿಧಿ ವಿಧಾನಗಳು ಸಹ ಇರುವುದಿಲ್ಲ ಎಂದು ಗಿರೀಶ್ಕಾರ್ನಾಡ್ ಮಗ ತಿಳಿಸಿದ್ದಾರೆ. ಈಗಾಗಲೇ ಕಾರ್ನಾಡ್ಸರಸ್ವತಿ ಸಹ ಯಾರು ಅಪಾರ್ಟ್ ಮೆಂಟ್ ಬಳಿ ಬಾರದಂತೆ ಮನವಿ ಮಾಡಿದ್ದಾರೆ. ಮನೆಯ ಬಳಿ ಸಾಕಷ್ಟು ಜನರು ನೆರೆದರೆ ತೊಂದರೆ ಆಗುತ್ತದೆ. ಹೀಗಾಗಬಾರದು ಎಂದು ನಿವೇದಿಸಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top