ದಚ್ಚು ಭೇಟಿಯಾದ ವಿಲನ್ ಪ್ರೊಡ್ಯೂಸರ್!

Picture of Cinibuzz

Cinibuzz

Bureau Report

ಸ್ಟಾರ್ ಹೀರೋ ಅಂದಮೇಲೆ ನಿರ್ಮಾಪಕರು, ನಿರ್ದೇಶಕರು ಭೇಟಿಯಾಗೋದು, ಉಭಯ ಕುಶಲೋಪರಿ ಮಾಡೋದೆಲ್ಲವೂ ಕಾಮನ್ನು. ಹಾಗೆ ಭೇಟಿಯಾದ್ರೂ ಅಂದ್ರೆ ಹೊಸ ಸಿನಿಮಾದ ಮಾತುಕತೆಗಾಗಿಯೇ ಎಂದು ಅಭಿಮಾನಿಗಳಾಗಲಿ, ಮೀಡಿಯಾದವರಾಗಲಿ ಭಾವಿಸುವುದು ಸಹಜವೇ. ಸದ್ಯ ಇಂತಹುದೇ ಅನುಮಾನಕ್ಕೆ ಸಿ.ಆರ್. ಮನೋಹರ್ ಈಡಾಗಿದ್ದಾರೆ. ಹೌದು.

ಇತ್ತೀಚಿಗೆ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾಗಿದ್ದು, ಇವರಿಬ್ಬರು ತೆಗೆಸಿಕೊಂಡಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮಧ್ಯೆ ಮನೋಹರ್ ಯಾಕಪ್ಪ ದರ್ಶನ್ ಅವರನ್ನು ಭೇಟಿ ಆದ್ರೂ ಅನ್ನೋ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳಲ್ಲಿದೆ. ಮೇಲ್ನೋಟಕ್ಕಿದು ಔಪಚಾರಿಕ ಭೇಟಿ ಎಂದು ಹೇಳುತ್ತಿದ್ದರೂ ಸಹ ಸಿ. ಆರ್. ಮನೋಹರ್ ನಿರ್ಮಾಣದಲ್ಲಿ ದರ್ಶನ್ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ಗುಸು ಗುಸು ಸಹ ಕೇಳಿಬರುತ್ತಿದೆ. ಸದ್ಯ ಒಡೆಯ ಚಿತ್ರೀಕರಣವನ್ನು ಮುಗಿಸಿರುವ ದರ್ಶನ್ ಕೈಯ್ಯಲ್ಲಿ ರಾಬರ್ಟ್, ಗಂಡು ಗಲಿ ವೀರಮದಕರಿ ನಾಯಕ, ಜೋಡೆತ್ತು ಮತ್ತೂ ಒಂದು ಸಿನಿಮಾದಲ್ಲಿ ಬ್ಯುಸಿ ಇರುವ ದರ್ಶನ್, ಮನೋಹರ್ ಸಿನಿಮಾವನ್ನು ಒಪ್ಪಿಕೊಳ್ಳುವರೋ, ಇಲ್ಲ ಪೆಂಡಿಂಗ್ ನಲ್ಲಿಡುವರೋ ನೋಡ್ಬೇಕು.

ಇನ್ನಷ್ಟು ಓದಿರಿ

Scroll to Top