ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಭುಜದ ನೋವಿನಿಂದ ಬಳಲುತ್ತಿದ್ದು, ಲಂಡನ್ ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಬಲಭುಜದಲ್ಲಿ ನೋವು ಕಾಣಿಸಿಕೊಂಡಿದ್ದರಿಂದಾಗಿ ಜು. 9ರಂದು ಲಂಡನ್‌ಗೆ ತೆರಳಲಿರುವ ಅವರು ಸಣ್ಣ ಸರ್ಜರಿ ಮಾಡಿಸಲಿದ್ದಾರೆ. ಒಂದು ತಿಂಗಳು ಲಂಡನ್‌ನಲ್ಲೇ ಇದ್ದು ಚಿಕಿತ್ಸೆ ಪಡೆದ ಬಳಿಕ ತವರಿಗೆ ಮರಳಲಿದ್ದಾರೆ. ಸದ್ಯ ಶಿವಣ್ಣ ನಟನೆಯ ರುಸ್ತುಂ ಸಿನಿಮಾ ಬಿಡುಗಡೆಗೆ ರೆಡಿಯಿದ್ದು, ದ್ರೋಣ ಹಾಗೂ ಆನಂದ್ ಸಿನಿಮಾಗಳ ಶೂಟಿಂಗ್ ಮುಗಿಸಿ ಲಂಡನ್ ಗೆ ತೆರಳಲಿದ್ದಾರೆ ಶಿವಣ್ಣ.
ಹ್ಯಾಟ್ರಿಕ್ ಹೀರೋಗೆ ಭುಜದ ಸರ್ಜರಿ!
Cinibuzz
Bureau Report
ಇನ್ನಷ್ಟು ಓದಿರಿ











































