ತಮಿಳು ನಟ ವಿಶಾಲ್ ಹೆಗ್ಗಣದಂತೆ: ನಿರ್ದೇಶಕ ಭಾರತಿರಾಜ್

Picture of Cinibuzz

Cinibuzz

Bureau Report

ತಮಿಳು ಹಿರಿಯ ನಿರ್ದೇಶಕ ಭಾರತಿರಾಜ ಮತ್ತು ನಟ ವಿಶಾಲ್ ನಡುವೆ ತೀವ್ರ ವಾಕ್ಸಮರ ನಡೆದಿದ್ದು ತಮಿಳು ಚಿತ್ರೋದ್ಯಮದಲ್ಲಿ ಸೆನ್ಸೇಷನ್ ಗೆ ಕಾರಣವಾಗಿದೆ. ನಿರ್ಮಾಪಕರ ಸಂಘದಲ್ಲಿ ಅಧ್ಯಕ್ಷಗಿರಿಗೆ ವಿಶಾಲ್ ರಂತಹ ಹೆಗ್ಗಣ ನುಗ್ಗಿದೆ, ಅವುಗಳನ್ನು ಒದ್ದು ಓಡಿಸಬೇಕೆಂದು ಭಾರತೀರಾಜ್ ಹರಿಹಾಯ್ದಿದ್ದಾರೆ. ಸಂಘದಲ್ಲಿ ಬೆಳೆದಿರುವ ಕಳೆಯನ್ನು ಕೀಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಿರ್ಮಾಪಕರ ಮಂಡಳಿಯಲ್ಲಿ ಸೇರಿಕೊಂಡಿರುವ ಕ್ರಿಮಿಗಳನ್ನು ತೊಲಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿಶಾಲ್ ವಿರುದ್ಧ ತಿರುಗಿಬಿದ್ದಿದ್ದಾರೆ.

ನಾಡಿಗರ್ ಸಂಘವನ್ನು ತಮಿಳೇತರು ಮುನ್ನಡೆಸುತ್ತಿರುವುದು ನೋವಿನ ಸಂಗತಿ. ನಾಡಿಗರ್ ಸಂಘಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಭಾಗ್ಯರಾಜ್ ತಂಡವನ್ನು ಗೆಲ್ಲಿಸುವ ಮೂಲಕ ತಮಿಳು ನಟರ ಉಪಸ್ಥಿತಿಯನ್ನು ರಕ್ಷಿಸಿಕೊಳ್ಳುವ ಅವಕಾಶ ಇದೆ. ಭಾಗ್ಯರಾಜ್ ಗೆದ್ದ ಕೂಡಲೆ ದಕ್ಷಿಣದ ನಟ ನಟಿಯರ ಸಂಘವನ್ನು ತಮಿಳು ನಟರ ಸಂಘವಾಗಿ ಬದಲಾಯಿಸಬೇಕು ಎಂದಿದ್ದಾರೆ.  ನಾಡಿಗರ್ ಸಂಘವನ್ನು ತಮಿಳು ನಟರ ಸಂಘವಾಗಿ ಬದಲಾಯಿಸುವುದೇ ನನ್ನ ಧ್ಯೇಯ ಎಂದು ಭಾರತೀರಾಜ ಹೇಳಿರುವುದು ತಮಿಳು ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಶೀಘ್ರದಲ್ಲೇ ನಾಡಿಗರ್ ಸಂಘದ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಭಾರತಿರಾಜ ಹೇಳಿಕೆ ವರ್ಕ್ ಆಗುತ್ತಾ ನೋಡ್ಬೇಕು.

ಇನ್ನಷ್ಟು ಓದಿರಿ

Scroll to Top