ಏಳು ಬ‍ಣ್ಣಗಳ ಸಮಾಗಮ `ಮಳೆಬಿಲ್ಲು’

Picture of Cinibuzz

Cinibuzz

Bureau Report

ಏಳು ಬಣ್ಣಗಳ ಸಮಾಗಮವೇ ಮಳೆಬಿಲ್ಲು. ಈ ಮಳೆಬಿಲ್ಲನ್ನು ಮನುಷ್ಯನ ಜೀವನದ ಕಲರ್‍ಫುಲ್ ಲೈಫ್‍ಗೆ ಹೋಲಿಸಿ ನಾಗರಾಜ್ ಹಿರಿಯೂರು ಚಲನಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಮಳೆಬಿಲ್ಲು ಎಂಬ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮಳೆಬಿಲ್ಲಿನ ನಾಯಕನಾಗಿ ಶರತ್ ನಾಯಕಿಯಾಗಿ ಕರಿಯಪ್ಪನ ಸೊಸೆ ಸಂಜನ ಆನಂದ್ ನಟಿಸಿದ್ದಾರೆ. ಚಿತ್ರಕ್ಕೆ ಗಣೇಶ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕರ ಸಹೋದರ ನಿಂಗಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಟ್ರೇಲರ್ ಸಮಾರಂಭದಲ್ಲಿ ನಿರ್ದೇಶಕ ನಾಗರಾಜ್ ಮಾತನಾಡಿ, “ನನ್ನ ಚಿತ್ರದಲ್ಲಿ ಕಥೆಯೇ ಹೀರೋ. ನಾನು ರವಿಚಂದ್ರನ್ ಅವರ ಅಭಿಮಾನಿ. ಗೂಗಲ್‍ನಲ್ಲೇ ನಿರ್ದೇಶನ ಹೇಗೆ ಮಾಡೊದೆಂದು ಕಲಿತೆ. ಹುಡುಗರ ಜೀವನ ಬಿಳಿ ಹಾಳೆ ಇದ್ದ ಹಾಗೆ. ಅವರ ಲೈಫ್‍ನಲ್ಲಿ ಹುಡುಗಿಯೊಬ್ಬಳು ಬಂದಾಗ ಅವರ ಜೀವನದಲ್ಲಿ ಮಳೆ ಬಂದ ಹಾಗೆ ಆ ಮಳೆಬಿಲ್ಲು ಯಾರು ಅಂತ ಚಿತ್ರದಲ್ಲಿ ಹೇಳಿದ್ದೇವೆ ಅಂತ ಹೇಳಿದರು. ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್ ಮಾತನಾಡಿ ಇದೊಂದು ಮ್ಯೂಜಿಕಲ್ ಲವ್‍ಸ್ಟೋರಿ. ಈ ಚಿತ್ರದಲ್ಲಿ 8 ಹಾಡುಗಳನ್ನು ಬರೆದ ನಂತರ ಟ್ಯೂನ್ ಮಾಡಿಕೊಂಡು 10 ಹಾಡುಗಳು ಈ ಚಿತ್ರದಲ್ಲಿದ್ದು, ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿ ಬಂದಿವೆ ಎಂದು ಹೇಳಿದರು. ಫಿಲಂ ಛೇಂಬರ್ ಅಧ್ಯಕ್ಷ ಚಿನ್ನೇಗೌಡ್ರು ಮಾತನಾಡಿ ಚಿತ್ರರಂಗವನ್ನು ಒಂದು ಕುಟುಂಬ ಎನ್ನುತ್ತೇವೆ. ಇಲ್ಲಿ ಕುಟುಂಬವೇ ಸೇರಿ ಒಂದು ಚಿತ್ರ ಮಾಡಿದ್ದಾರೆ. ಹೋಂವರ್ಕ್ ಮಾಡಿಕೊಳ್ಳದೆ ಚಿತ್ರರಂಗಕ್ಕೆ ಬರಬೇಡಿ” ಎಂದು ಹೊಸದಾಗಿ ಚಂದನವನಕ್ಕೆ ಎಂಟ್ರಿ ಕೊಡುವ ಮಂದಿಗೆ ಕಿವಿಮಾತನ್ನು ಹೇಳಿದರು.

 

ಇನ್ನಷ್ಟು ಓದಿರಿ

Scroll to Top