ಕೀರ್ತಿ ಸುರೇಶ್ ಕಾಲೆಳೆದ ಶ್ರೀರೆಡ್ಡಿ!

Picture of Cinibuzz

Cinibuzz

Bureau Report

ಶ್ರೀರೆಡ್ಡಿ ತಕರಾರುಗಳು ಒಂದೆರಡಲ್ಲ. ಸದಾ ಒಂದಿಲ್ಲೊಂದು ವಿಚಾರಕ್ಕೆ ಅವರಿವರ ಮೇಲೆ ಕೆಸರೆರಚುತ್ತಾ ಗೂಬೆ ಕೂರಿಸುವ, ಆರೋಪಿಸುವ ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಎಕ್ಸ್ ಕ್ಲೂಸಿವ್ ಆಧಾರವಿಲ್ಲದ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರೂ ಕಿಂಚಿತ್ತು ಉಪಯೋಗವಾಗಿಲ್ಲದಿರುವುದು ದುರಂತ. ಸದ್ಯ ಶ್ರೀರೆಡ್ಡಿ ಸಣ್ಣಗಾದ ಮೇಲೆ ಕೀರ್ತಿ ರೋಗಿಯಂತಾಗಿದ್ದಾರೆಂದು ಕೀರ್ತಿ ಸುರೇಶ್ ಅವರನ್ನು ಅಣಿಕಿಸುವ ಕೆಲಸವನ್ನು ಮಾಡಿದ್ದಾರೆ.

ನಾನು ಮತ್ತು ಕೀರ್ತಿ ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆವು. ಆದರೆ ಕೀರ್ತಿ ತೂಕ ಇಳಿಸಿಕೊಂಡಿದ್ದರಿಂದ ಯಾರೂ ಆಕೆಯನ್ನು ಗುರುತಿಸಲಿಲ್ಲ. ಪ್ರತಿಯೊಬ್ಬರೂ ನನ್ನನ್ನು ಕಂಡು ಸೆಲ್ಪಿ ಕೇಳಿದರು. ತೂಕ ಇಳಿದ ನಂತರ ಕೀರ್ತಿ ಯಾರೂ ಗುರುತಿಸದ ಮಟ್ಟಿಗೆ ರೋಗಿಯಂತಾಗಿದ್ದಾರೆ ಎಂದಿರುವುದಲ್ಲದೇ ಸಾಯಿ ಪಲ್ಲವಿ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ. ಈ ಕುರಿತು ಸಾಕಷ್ಟು ನೆಗೆಟೀವ್ ಕಮೆಂಟ್ ಗಳು ಬಂದಿದ್ದು, ಶ್ರೀರೆಡ್ಡಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಬಂಧವಿಲ್ಲದ ವಿಚಾರಗಳನ್ನು ಯಾಕೆ ಮಾತನಾಡುತ್ತಿರಾ ಎಂದು ಕೇಳಿದ್ದಾರೆ.

ಇನ್ನಷ್ಟು ಓದಿರಿ

Scroll to Top