ಮತ್ತೆ ನಿರ್ದೇಶನಕ್ಕಿಳಿದ ನಾರಾಯಣ!

Picture of Cinibuzz

Cinibuzz

Bureau Report

ಅವನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆ ಮುನ್ನವೇ ರಕ್ಷಿತ್ ಶೆಟ್ಟಿ ಅವರ ಬಿಗ್ ಬಜೆಟ್ ನ ಸಿನಿಮಾ ಪುಣ್ಯಕೋಟಿಯತ್ತ ಮುಖ ಮಾಡಿದ್ದಾರೆ. ಉಳಿದವರು ಕಂಡಂತೆ ಸಿನಿಮಾ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟಿದ್ದ ರಕ್ಷಿತ್ ಶೆಟ್ಟಿ ನಂತರ ನಟನೆಯಲ್ಲಿ ಸಕ್ರಿಯರಾಗಿ ಮತ್ತಾವುದೇ ಸಿನಿಮಾವನ್ನು ಡೈರೆಕ್ಟ್ ಮಾಡಲಿಲ್ಲ. ಬರೋಬ್ಬರಿ ಐದು ವರ್ಷದ ನಂತರ ಮತ್ತೆ ನಿರ್ದೇಶನಕ್ಕಿಳಿದಿರೋದು ಅಭಿಮಾನಿಗಳಲ್ಲಿ ಸಂತಸವನ್ನು ತಂದಿದೆ.


ಇದೊಂದು ಸ್ಪೆಷಲ್ ಸಿನಿಮಾವಾಗಿದ್ದು, ಈಗಾಗಲೇ ಕೇಳಿರುವ ಟೈಟಲ್ಲಿಗೂ ಸಿನಿಮಾಕ್ಕೂ ಬಹಳಷ್ಟು ಲಿಂಕ್ ಇದ್ದು, ಅದು ಹೇಗೆ ಅನ್ನೋದನ್ನು ಸಿನಿಮಾ ನೋಡಿಯೇ ತಿಳಿಯಬೇಕಂತೆ. ಭಾರಿ ಗಾತ್ರದ ಸೆಟ್ ಹಾಕಲು ಸಹ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ದು, ಪುಣ್ಯಕೋಟಿ ಬಹುಭಾಷೆಗಳಲ್ಲೂ ರಿಲೀಸ್ ಆಗಲಿದೆ.

ಇನ್ನಷ್ಟು ಓದಿರಿ

Scroll to Top