ಸಿನಿಮಾ ಕಲಾವಿದನ ಬದುಕಿನ ಚಿತ್ರಣ ಚಿತ್ರಕಥಾ!

Picture of Cinibuzz

Cinibuzz

Bureau Report

ಜಾಲಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಪ್ರಜ್ವಲ್ ಎಂ ರಾಜಾ ನಿರ್ಮಾಣ ಮಾಡಿರುವ ಹೊಸಬರ ಸಿನಿಮಾ ಚಿತ್ರಕಥಾ. ಬಾಲಾದಿತ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟ್ರೇಲರ್ ಹಾಗೂ ಪೋಸ್ಟರ್ ಮೂಲಕ ಪಕ್ಕಾ ಹಾರರ್ ಬೇಸ್ಡ್ ಸಿನಿಮಾದಂತೆ ಕಾಣುವ ಚಿತ್ರಕಥಾದಲ್ಲಿ ಮತ್ತಿನ್ನೇನೋ ವಿಷಯ ಅಡಗಿರುವುದು ಸದ್ಯಕ್ಕೆ ಸಸ್ಪೆನ್ಸ್. ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು, ಮೂರು ಲಕ್ಷಕ್ಕೂ ಅಧಿಕ ಹಿಟ್ಸ್ ಸಹ ಪಡೆದುಕೊಂಡು ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಕಲಾವಿದನ ಬದುಕಿನ ಸುತ್ತಲೇ ಗಿರಕಿ ಹೊಡೆಯುವ ಚಿತ್ರಕಥಾ, ಬಹಳಷ್ಟು ಕೌತುಕತೆಯನ್ನು ಹಿಡಿದಿಟ್ಟುಕೊಂಡಿದೆ.

ಚಿತ್ರದಲ್ಲಿ ಸುಜಿತ್ ರಾಥೋಡ್, ಸುಧಾರಾಣಿ, ದಿಲೀಪ್ ರಾಜ್, ಬಿ ಜಯಶ್ರೀ, ತಬಲಾ ನಾಣಿ, ಅನುಷಾ ರಾವ್ ಸೇರಿದಂತೆ ಬಹುದೊಡ್ಡ ತಾರಾಂಗಣವೇ ಇದೆ. ಚೇತನ್ ಕುಮಾರ್ ಸಂಗೀತ ಮತ್ತು ತನ್ವಿಕ್ ಛಾಯಾಗ್ರಹಣ, ಕೀರ್ತಿ ಬಿಎಂ ಅವರ ಸಂಭಾಷಣೆ, ಮಧು ಅವರ ಸಂಕಲನ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top