ಅಚ್ಚರಿ ಹುಟ್ಟಿಸಿದ ಭುವನ್ ಗಳು!

Picture of Cinibuzz

Cinibuzz

Bureau Report

ರಾಂಧವ ಸಿನಿಮಾದ ನಾಯಕ ಬಿಗ್ ಬಾಸ್ ಭುವನ್ ಅವರ ಹೆಸರನ್ನು ಕರ್ನಾಟಕದಲ್ಲಿ ಸುಮಾರು ಮಕ್ಕಳಿಗೆ ನಾಮಕರಣ ಮಾಡಿದ್ದರಂತೆ. ಅವರ ಸರಳತೆ, ಜನರನ್ನು ಗೌರವಿಸುವ ರೀತಿ, ಹೆಣ್ಣುಮಕ್ಕಳ ಮೇಲೆ ಕಾಳಜಿ , ಅವರ ಸಾಮಾಜಿಕ ಕಳಕಳಿಯ ಮನೋಬಾವ ಇದನ್ನೆಲ್ಲ ನೋಡಿ ನಮ್ಮ ಮಕ್ಕಳಿಗೂ ಇದೆ ತರಹದ ಗುಣಗಳು ಬರಲಿ ಎಂದು “ಭುವನ್” ಎಂದು ನಾಮಕರಣ ಮಾಡಿದ್ದೇವೆ ಎಂದು ಹೇಳುತ್ತಾರೆ ಈ ಪಾಪುಗಳ ಪೋಷಕರು.

ಇದೇ ಹಾದಿಯಲ್ಲಿ ಭುವನ್ ಮೊನ್ನೆ ಭುವನ್ ಪಾಪುವಿನ ನಾಮಕರಣಕ್ಕೆ ಬೆಂಗಳೂರಿನಿಂದ ತುಮಕೂರಿಗೆ ಹೊಗಿದ್ದು ವಿಶೇಷ. ಹೀರೋಗಳು ಪರದೆ ಮೇಲೆ ಹೀರೊ ಅನ್ನಿಸಿಕೊಂಡವರು ಹಲವು . ಆದರೆ ಚೊಚ್ಚಲ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲೇ ಭುವನ್ ಈ ಮಟ್ಟಕ್ಕೆ ಜನರ ಪ್ರೀತಿ ಗಳಿಸಿರುವುದು ಶ್ಲಾಘನೀಯ ವಿಚಾರ. ಒಳ್ಳೆಯವರು ಎಲ್ಲಿದ್ದರೂ ಜನರು ಪ್ರೀತಿಸುತ್ತಾರೆ ಎಂಬುದಕ್ಕೆ ಇದೇ ಒಂದು ಉದಾಹರಣೆ. 

ಭುವನ್ ಅವರ ರಾಂಧವ ಚಿತ್ರದ ಕರ್ನಾಟಕದ ವೈಶಿಷ್ಟ್ಯತೆ ಬಗ್ಗೆ ಇರೋ “ಈ ಧರೆಯ ಸೊಬಗು ನಮ್ಮ ನಾಡು” ಹಾಡು ಇವತ್ತು ಸಂಜೆ 6 ಗಂಟೆಗೆ ಆನಂದ್ ಆಡಿಯೋ ಯು ಟ್ಯೂಬ್ ನಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಓದಿರಿ

Scroll to Top