ಸದ್ಯದಲ್ಲಿ ಮಕ್ಕಳ ತೀರ್ಪು ಬಿಡುಗಡೆ!

Picture of Cinibuzz

Cinibuzz

Bureau Report

ಕೊಡಗಿನ ಕೊಟ್ಟ್ ಕತ್ತಿರ ಪ್ರಕಾಶ್ ನಿರ್ದೇಶಿಸಿ ನಟಿಸಿರುವ ಮಕ್ಕಳ ತೀರ್ಪು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಕೊಡಗಿನ ಚೇರಂಬಾಣೆಯವರಾದ ಕೊಟ್ಟ್ ಕತ್ತಿರ ಪ್ರಕಾಶ್ ಬೆಂಗಳೂರಿನಲ್ಲಿ ಉದ್ಯಮಿ ಹಾಗೂ ಚಲನಚಿತ್ರರಂಗದಲ್ಲಿ ಹೆಸರು ಗಳಿಸಿದ್ದು ಈಗಾಗಲೇ ಹಲವು ಚಿತ್ರಗಳನ್ನ್ಲು ನಿರ್ದೇಶಿಸಿ, ನಟಿಸಿದ್ದಾರೆ. ಈಗಿನ ಕಾಲಕ್ಕೆ ತಕ್ಕಂತೆ ಸಾಮಾಜಿಕ ಸಮಸ್ಯೆಗಳನ್ನು ಜನರಿಗೆ ಮನದಟ್ಟು ಮಾಡುವ ಉದ್ದೇಶದಿಂದ ಮಕ್ಕಳಿಗಾಗಿಯೇ ಚಿತ್ರವನ್ನು ಮಾಡಿದ್ದು ಅದುವೇ ಮಕ್ಕಳ ತೀರ್ಪು ಚಿತ್ರವಾಗಿದೆ.


ಬಾಲಾಜಿ ಚಿತ್ರಾಲಯಯ ಚಿತ್ರವನ್ನು ಅರ್ಪಿಸಿದ್ದು, ಎನ್.ಟಿ.ಜಯರಾಮ ರೆಡ್ಡಿ ಕಥೆ-ಸಂಭಾಷಣೆ-ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಶೇಖರ್ ಛಾಯಾಗ್ರಹಣ, ಮುತ್ತುರಾಜ್ ಸಂಕಲನ, ಶಿವಸತ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ತಾರಾಂಗಣದಲ್ಲಿ  ಕೊಡಗಿನ ತೇಲಪಂಡ ಪವನ್ ತಮ್ಮಯ್ಯ ಮಗಳು ಯಶಿ ತಮ್ಮಯ್ಯ, ಮಂಡಿರ ಪದ್ಮ, ನೆಲ್ಲ ಚಂಡ ರೇಖಾ ನಾಣಯ್ಯ ಹಾಗೂ ಡ್ರಾಮ ಜೂನಿಯರ್ ಬೇಬಿ ಅನ್ಸಿಕ ಸೇರಿದಂತೆ ಹಲವು ಮಕ್ಕಳು ನಟಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top