ಅದ್ದೂರಿ ಕಾರ್ಯಕ್ರಮವನ್ನು ರದ್ದು ಮಾಡಿದ ಮಹರ್ಷಿ ಚಿತ್ರತಂಡ!

Picture of Cinibuzz

Cinibuzz

Bureau Report

ಮಹೇಶ್ ಬಾಬು ನಟನೆಯ ಮಹರ್ಷಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿದ್ದು, ಟಾಲಿವುಡ್ ನ ಈ ವರ್ಷದ ಬೆಸ್ಟ್ ಸಿನಿಮಾಗಳ ಪೈಕಿ ಮಹರ್ಷಿ ಕೂಡ ಒಂದಾಗಿದ್ದು, ಐವತ್ತನೇ ದಿನವನ್ನು ಪೂರೈಸಿದೆ. ಸಿನಿಮಾ ಸಕ್ಸಸ್ ನ ನಂತರ ಚಿತ್ರತಂಡ ಅದ್ದೂರಿ ಕಾರ್ಯಕ್ರಮವನ್ನು ಮಾಡಬೇಕೆಂದು ನಿರ್ಧರಿಸಿ ತಯಾರಿಯನ್ನು ಮಾಡಿಕೊಳ್ಳುತ್ತಿತ್ತು. ಆದರೆ  ನಿರ್ದೇಶಕಿ ನಿರ್ಮಾಪಕಿ, ನಟಿ ವಿಜಯ ನಿರ್ಮಲ ಅವರ ನಿಧನದ ಕಾರಣ ಈ ಕಾರ್ಯಕ್ರಮವನ್ನು ಸದ್ಯಕ್ಕೆ ರದ್ದು ಮಾಡಲಾಗಿದೆ.

ಅಂದಹಾಗೆ ವಿಜಯ ನಿರ್ಮಲಾ ಅವರು ತೆಲುಗು ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಹಾಗೂ ಮಹೇಶ್ ಬಾಬು ಅವರ ಮಲತಾಯಿ. ವಿಜಯ ನಿರ್ಮಲಾ ಕೃಷ್ಣಮೂರ್ತಿ ಎಂಬುವರನ್ನ ವಿವಾಹವಾಗಿದ್ದರು. ಈ ದಂಪತಿಗೆ ನರೇಶ್ ಎಂಬ ಮಗ ಇದ್ದಾನೆ. ನರೇಶ್ ಕೂಡ ಚಿತ್ರರಂಗದಲ್ಲಿ ನಟ. ಕೃಷ್ಣಮೂರ್ತಿ ಅವರಿಂದ ವಿಚ್ಛೇದನ ಪಡೆದ ನಿರ್ಮಲಾ, ಬಳಿಕ ಸೂಪರ್ ಸ್ಟಾರ್ ಕೃಷ್ಣ ಅವರ ಜೊತೆ ಮದುವೆಯಾದರು. ವಿಜಯ ನಿರ್ಮಲಾ ಸುಮಾರು 44ಕ್ಕೂ ಅಧಿಕ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ಮಹಿಳೆಯೊಬ್ಬರು ಅತಿ ಹೆಚ್ಚು ಸಿನಿಮಾ ನಿರ್ದೇಶನ ಮಾಡಿರುವ ಕಾರಣ ಇದು 2002ರಲ್ಲಿ ಗಿನ್ನಿಸ್ ದಾಖಲೆಯಾಗಿದೆ. ಇನ್ನು, ‘ಮಹರ್ಷಿ’ ಸಿನಿಮಾ 200 ಸೆಂಟರ್ ಗಳಲ್ಲಿ 50 ದಿನವನ್ನು ಪೂರೈಸಿದೆ. ಮಹೇಶ್ ಬಾಬು, ಪೂಜಾ ಹೆಗ್ಡೆ ಹಾಗೂ ಅಲ್ಲಾರಿ ನರೇಶ್ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top