ಕೆಂಪೇಗೌಡ ಜಯಂತಿಗೆ ಶುಭಕೋರಿದ ಚಾಲೆಂಜಿಂಗ್ ಸ್ಟಾರ್!

Picture of Cinibuzz

Cinibuzz

Bureau Report

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೆಂಪೇಗೌಡ ಜಯಂತಿಯ ಅಂಗವಾಗಿ ಕೆಂಪೇಗೌಡರನ್ನು ನೆನೆದು ಟ್ವೀಟ್ ಮಾಡುವ ಮೂಲಕ ನಾಡದೊರೆಯನ್ನು ಸ್ಮರಿಸಿದ್ದಾರೆ.

”ನಾಡಪ್ರಭು ಕೆಂಪೇಗೌಡರು ಹಾಗೂ ಅವರ ಕುಟುಂಬ ಸಾಕಷ್ಟು ವರ್ಷಗಳು ಶ್ರಮಿಸಿ ತಮ್ಮ ಕನಸಿನ ರಾಜಧಾನಿ ಬೆಂಗಳೂರು ಸಾಮಾನ್ಯ ಜನರಿಗೆ ಆಸರೆಯಾಗಿರಲೆಂದು ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆಗಳೊಂದಿಗೆ ಕಟ್ಟಿಕೊಟ್ಟವರು. ಹಲವಾರು ದೇವಾಲಯಗಳು, ಕೆರೆಗಳು, ಮಹಾದ್ವಾರಗಳು, ಶಾಲೆಗಳನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ” ಎಂದು ಅವರ ಸಾಧನೆ ನೆನೆದಿದ್ದಾರೆ. ಈ ಕನಸಿನ ನಗರಿಯನ್ನು ಗೌಡರ ಆಸೆ-ಆದರ್ಶಗಳೊಂದಿಗೆ ಶುದ್ಧವಾಗಿ, ಪರಿಸರ ಬದ್ಧವಾಗಿ ಕಾಪಾಡಿಕೊಂಡು ಬೆಳೆಸಿಕೊಂಡು ಹೋಗುವುದು ಇಲ್ಲಿ ವಾಸವಾಗಿರುವ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವೂ ಹೌದು” ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top