ಪುತ್ತೂರಿನ ಖಾಸಗಿ ಕಾರ್ಯಕ್ರಮದಲ್ಲಿ ದರ್ಶನ್ ಪ್ರತ್ಯಕ್ಷ!

Picture of Cinibuzz

Cinibuzz

Bureau Report

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅಲ್ಲಿನ ಪ್ರಸಿದ್ಧ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಅಲ್ಲಿ ನೆರೆದಿದ್ದ ತಮ್ಮ ಅಭಿಮಾನಿಗಳ ಜತೆ ಬೆರೆತು ಅವರೊಂದಿಗೆ ಕಾಲ ಕಳೆದಿದ್ಧಾರೆ. ಸಿನಿಮಾದಲ್ಲಿ ಮಾತ್ರ ಸ್ಟಾರ್ಡರ್ಮ್ ತೋರದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಜ ಜೀವನದಲ್ಲಿಯೂ ಥೇಟ್ ಯಜಮಾನನಂತೆ ಕಂಗೊಳಿಸತೊಡಗಿದ್ದಾರೆ.

ಸದ್ಯ ನಟ ದರ್ಶನ್ ಅವರು  ಇದೀಗ ‘ರಾಬರ್ಟ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರದ ಎರಡನೇ ಶೆಡ್ಯೂಲ್ ನಡೆಯುತ್ತಿದ್ದು, ಇನ್ನೂ ನಾಯಕಿಯ ಆಯ್ಕೆ ಪಕ್ಕಾ ಆಗಬೇಕಿದೆ. ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರವು ಈಗಾಗಲೇ ಭಾರೀ ಕುತೂಹಲ ಕೆರಳಿಸಿದೆ. ಬಿಗ್ ಬಜೆಟ್ ಮತ್ತು ಬಹುತಾರಾಗಣದ ರಾಬರ್ಟ್ ಚಿತ್ರವು ಈ ವರ್ಷದ ಕೊನೆಯೊಳಗೆ ಬಿಡುಗಡೆಯಾಗಲಿದೆ. ಇನ್ನು ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ.

ಇನ್ನಷ್ಟು ಓದಿರಿ

Scroll to Top