ಸೈರಾ ನರಸಿಂಹ ರೆಡ್ಡಿಗೆ ಕರ್ನಾಟಕದಲ್ಲಿ ಫುಲ್ ಡಿಮ್ಯಾಂಡ್!

Picture of Cinibuzz

Cinibuzz

Bureau Report

ಭಾರತೀಯ ಚಿತ್ರರಂಗದಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿರುವ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸಿನಿಮಾ ಸೈರಾ ನರಸಿಂಹ ರೆಡ್ಡಿ. ಬಹುದೊಡ್ಡ ತಾರಾಬಳಗವನ್ನೇ ಹೊಂದಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್, ಅಮಿತಾಬ್ ಬಚ್ಚನ್, ವಿಜಯ್ ಸೇತುಪತಿ, ಜಗಪತಿ ಬಾಬು ಮತ್ತು ನಟಿಯರಾದ ತಮನ್ನಾ, ಅನುಷ್ಕಾ ಶೆಟ್ಟಿ ಮತ್ತು ನಯನತಾರಾ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ಸೈರಾ ಚಿತ್ರತಂಡದಿಂದ ಹೊಸ ಸುದ್ದಿ ಹೊರಬಿದ್ದಿದ್ದು, ಕೇಳುಗರಲ್ಲಿ ಅಚ್ಚರಿಯನ್ನುಂಟು ಮಾಡಿದೆ.

ಹೌದು ಸೈರಾ ನರಸಿಂಹ ರೆಡ್ಡಿ ಸಿನಿಮಾದ ಕರ್ನಾಟಕ ವಿತರಣೆಯ ಹಕ್ಕು ಕೋಟಿ ಕೋಟಿಗೆ ಬಿಕರಿಯಾಗಿದ್ದು, ಕನ್ನಡ ನೆಲದಲ್ಲಿಯೂ ಬಹಳ ಡಿಮ್ಯಾಂಡ್ ಕ್ರಿಯೇಟ್ ಆಗಿದೆಯಮತೆ. ತೆಲುಗು ಸಿನಿಮಾವಾಗಿದ್ದರೂ ಕನ್ನಡ ನಟ ಅಭಿನಯಸಿದ್ದಾರೆಂಬ ಕಾರಣಕ್ಕೆ ಕನ್ನಡಿಗರು ಸಿನಿಮಾವನ್ನು ಮುಕ್ತಮನಸ್ಸಿನಿಂದ ಕಾಯುತ್ತಿದ್ದಾರೆ. ಸೈರಾ ನರಸಿಂಹ ರೆಡ್ಡಿ ಸಿನಿಮಾ ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಪ್ರಯುಕ್ತ ರಿಲೀಸ್ ಆಗಲಿದೆ. ಈ ಚಿತ್ರವನ್ನು ಸುಧೀಂದರ್ ರೆಡ್ಡಿ ನಿರ್ದೇಶನ ಮಾಡಿದ್ದು, ಚಿರಂಜೀವಿ ಮಗ ರಾಮ್ ಚರಣ್ ತೇಜ್ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top