ಕನ್ನಡ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ರಕ್ಷಿತ್ ಶೆಟ್ಟಿ!

Picture of Cinibuzz

Cinibuzz

Bureau Report

ಕಿರಿಕ್ ಪಾರ್ಟಿ ಸಿನಿಮಾದ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ನಟಿಸುತ್ತಿರುವ ಬಹುನಿರೀಕ್ಷಿತ  ಚಿತ್ರ ಅವನೇ ಶ್ರೀಮನ್ನಾರಾಯಣ ಬಿಡುಗಡೆಗೆ ಸಿದ್ದಗೊಂಡಿದೆ. 19 ಮಾದರಿಯ ಸೆಟ್ ಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆಯಂತೆ. ಸಚಿನ್ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದೆ.

ಕನ್ನಡದ ಜತೆಗೆ ಹಿಂದಿಯಲ್ಲಿಯೂ ಏಕಕಾಲಕ್ಕೆ ರಿಲೀಸ್ ಮಾಡಲು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಧರಿಸಿದ್ದು, ಕನ್ನಡ ಸಿನಿಮಾ ಮೂಲಕ ರಕ್ಷಿತ್ ಶೆಟ್ಟಿ ಬಾಲಿವುಡ್ ಅಂಗಳಕ್ಕೂ ಕಾಲಿಡಲಿದ್ದಾರೆ. ಪೈಲ್ವಾನ್, ಕುರುಕ್ಷೇತ್ರ ಚಿತ್ರಗಳ ಬಿಡುಗಡೆ ದಿನಾಂಕವನ್ನು ನೋಡಿಕೊಂಡು ಅವನೇ ಶ್ರೀಮನ್ನಾರಾಯಣ ಥಿಯೇಟರ್ ಗೆ ಲಗ್ಗೆ ಇಡಲಿದ್ದು, ಆಗಸ್ಟ್ ಕಡೆಯ ವಾರ ರಿಲೀಸ್ ಆಗುವ ಸಾಧ್ಯತೆಯೂ ಇದೆ.

ಇನ್ನಷ್ಟು ಓದಿರಿ

Scroll to Top