ಆರಂಭವಾಯಿತು ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯ!

Picture of Cinibuzz

Cinibuzz

Bureau Report

ಸತ್ತು ಸುಮಾರು ವರ್ಷಗಳಾದರೂ ಸಾಲ್ವ್ ಆಗದೇ ಉಳಿದಿದ್ದ ವಿಷ್ಣು ವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕಡೆಗೂ ಟೈಮ್ ಬಂದಿದೆ. ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕವೂ ವಿಷ್ಣುವರ್ಧನ್ ಕುಟುಂಬದ ಆಶಯದಂತೆ ಮೈಸೂರಿನಲ್ಲಿ ನಿರ್ಮಾಣವಾಗಲಿದೆ. ಸಾಕಷ್ಟು ದಿನಗಳಿಂದಲೂ ವಿಷ್ಣು ವರ್ಧನ್ ಸ್ಮಾರಕವನ್ನು ಬೆಂಗಳೂರಿನಲ್ಲೇ ನಿರ್ಮಿಸಬೇಕೋ, ಇಲ್ಲ ಮೈಸೂರಿನಲ್ಲಿ ನಿರ್ಮಿಸಬೇಕೆಂಬ ಗೊಂದಲದಲ್ಲಿದ್ದ ಮಂದಿಗೆ ಕಡೆಗೂ ರಿಲೀವ್ ದೊರಕಿದೆ. ಸ್ಥಳದ ಕುರಿತಾಗಿ ವಿವಾದವೆದ್ದಿದ್ದ ವಿಚಾರಕ್ಕೆ ಹೈಕೋರ್ಟ್ ತೆರೆ ಎಳೆದು, ಸ್ಮಾರಕ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಜಾಗದ ಸುತ್ತಮುತ್ತಲೂ ಬೆಳೆದಿದ್ದ ಗಿಡ ಗಂಟೆಗಳನ್ನು ಕ್ಲೀನ್ ಮಾಡಿಸಲಾಗುತ್ತಿದ್ದು, ಸದ್ಯದಲ್ಲಿಯೇ ಕಾಂಪೌಂಡ್ ಸಹ ನಿರ್ಮಾಣವಾಗಲಿದೆ. ಮೈಸೂರು ಜಿಲ್ಲಾಡಳಿತವು 5 ಎಕರೆ ಸರ್ಕಾರಿ ಜಮೀನನ್ನು ಸ್ಯಾಂಕ್ಷನ್ ಮಾಡಿದ್ದು, ಡಾ. ವಿಷ್ಣುವರ್ಧನ್ ಪ್ರತಿಷ್ಠಾನ ಸಮಿತಿಗೆ ಜಮೀನನ್ನು ಅಧಿಕೃತವಾಗಿ ಹಸ್ತಾಂತರಿಸಿದೆ.

ಇನ್ನಷ್ಟು ಓದಿರಿ

Scroll to Top