ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ತಮ್ಮದೇ ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ಹೊಸದೊಂದು ಧಾರವಾಹಿಯನ್ನು ಶುರು ಮಾಡಿದ್ದಾರೆ. ಧಾರವಾಹಿಗೆ ಇವಳು ಸುಜಾತ ಎಂದು ಹೆಸರಿಡಲಾಗಿದ್ದು, ಈ ಧಾರವಾಹಿಗೆ ಕೃಷ್ಣ ತುಳಸಿಯಲ್ಲಿ ನಟಿಸಿದ್ದ ಮೇಘಶ್ರೀ ನಾಯಕಿಯಾಗಿಯೂ ಆಯ್ಕೆಯಾಗಿದ್ದಾರೆ. ಬಿಗ್ ಬಾಸ್ ಸೀಜನ್ 6ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಮೇಘಶ್ರೀ ನಾಗಕನ್ನಿಕ ಸೀರಿಯಲ್ ನಲ್ಲಿಯೂ ಈ ಹಿಂದೆ ನಟಿಸಿದ್ದರು.

ಸುಜಾತ ಎಂಬ ಸಾಮಾನ್ಯ ವರ್ಗದ ಹೆಣ್ಣಿನ ಜೀವನವನ್ನು ಆಧರಿಸಿದ ಕಥೆಯಾಗಿದ್ದು, ಸೆಂಟಿಮೆಂಟ್ ಅಂಶಗಳ ಮೂಲಕವೇ ಧಾರವಾಹಿ ಸಾಗಲಿದೆಯಂತೆ. ಇವಳು ಸುಜಾತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದ್ದು, ಸದ್ಯದಲ್ಲಿಯೇ ಧಾರವಾಹಿಯ ಕುರಿತಾಗಿ ಅಧಿಕೃತ ಮಾಹಿತಿ ಹೊರಬೀಳಲಿದೆ.











































