ಹ್ಯಾಟ್ರಿಕ್ ಹೀರೋ ಅಭಿಮಾನಿ ವಿಧಿವಶ!

Picture of Cinibuzz

Cinibuzz

Bureau Report

ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಕಶ್ಯಪ್ ಸಿಂಹ ನಿಧನ ಹೊಂದಿದ್ದಾರೆ. ಹೃದಯಘಾತದಿಂದ ಅವರು ಇಂದು ಬೆಳಿಗ್ಗೆ 8.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನವರೇ ಆದ ಕಶ್ಯಪ್ ಸಿಂಹ ಟಿವಿಎಸ್ ಮೋಟಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ರಾಯಲ್ ಎನ್ ಫೀಲ್ಡ್ ಬೈಕ್ ರೈಡರ್ ಕೂಡ ಆಗಿದ್ದರು.

ಹ್ಯಾಟ್ರಿಕ್ ಹೀರೋ ಮೇಲಿನ ಅಭಿಮಾನದಿಂದ ಶಿವಸೈನ್ಯ ಎನ್ನುವ ತಂಡವನ್ನು ಕಟ್ಟಿ ಬೆಳೆಸಿದ್ದರು. ಅದರ ಮೂಲಕ ತಮ್ಮ ಅಭಿಮಾನವನ್ನು ತೋರುತ್ತಿದ್ದರು. ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ರುಸ್ತುಂ ಸಿನಿಮಾವನ್ನು ಅದ್ದೂರಿಯಾಗಿ ವೆಲ್ ಕಮ್ ಮಾಡಿದ್ದರು. ಕಶ್ಯಪ್ ನಿಧನಕ್ಕೆ ಶಿವರಾಜ್ ಕುಮಾರ್ ಅಭಿಮಾನಿಗಳು ಸಂತಾಪ ಸೂಚಿಸಿದ್ದು, ಬೆಂಗಳೂರಿನ ಗುಡ್ಡದಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ.

ಇನ್ನಷ್ಟು ಓದಿರಿ

Scroll to Top