ಚಿತ್ರಭೂಮಿ ಸಾಂಸ್ಕೃತಿಕ ಕೇಂದ್ರ ಹಾಗೂ ಸಿನಿಮಾ ಅಧ್ಯಯನ ವಿಭಾಗ ಸಂಸ್ಕೃತಿ ಶಾಲೆಯು ಜುಲೈ 6ರಂದು ಗಿರೀಶ್ ಕಾರ್ನಾಡರ ಚಲನಚಿತ್ರೋತ್ಸವವನ್ನು ಆಯೋಜಿಸಿದೆ. ಇದೇ ಶನಿವಾರ ಸಂಜೆ 6ಕ್ಕೆ ಸಂಸ್ಕಾರ ಸಿನಿಮಾ ಪ್ರದರ್ಶನಗೊಳ್ಳಲಿದೆ. ಪ್ರತಿ ಶನಿವಾರ ಕಾರ್ನಾಡರ ಒಂದೊಂದೇ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ.

ಇನ್ನು ಶನಿವಾರ ಸಂಜೆ 5ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಅಗ್ರಹಾರ ಕೃಷ್ಣಮೂರ್ತಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸ್ಥಳ: ಉನ್ನತಿ ಸಭಾಂಗಣ, 1ನೇ ಅಡ್ಡರಸ್ತೆ, ಸಪ್ತಗಿರಿನಗರ, ಹೊಸಕೆರೆಹಳ್ಳಿ, ಬನಶಂಕರಿ ಮೂರನೇ ಹಂತ, ಬೆಂಗಳೂರು.











































