`ಯಾರು ಹೊಣೆ’ ಚಿತ್ರಕ್ಕೆ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ಟಿ. ಜಯರಾಮ ರೆಡ್ಡಿ ತದನಂತರ 30ಕ್ಕೂ ಹೆಚ್ಚಿನ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಅದಾದ ಮೇಲೆ ಅಷ್ಟೇನು ಕಾಣಿಸಿಕೊಳ್ಳಲಿದ್ದ ಅವರು ದೀರ್ಘಕಾಲದ ಗ್ಯಾಪ್ ನಂತರ ತಮಟೆ ನರಸಿಂಹಯ್ಯ ಚಿತ್ರದ ಮೂಲಕ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ.

ಹಿರಿಯ ನಟರುಗಳಾದ ವೈಜಯಂತ್ ಬಿರಾದರ್ ಮತ್ತು ದತ್ತಣ್ಣ ಕಾಂಬಿನೇಷನ್ನಿನಲ್ಲಿ ತಮಟೆ ನರಸಿಂಹಯ್ಯ ಸಿನಿಮಾ ಕತೆ ಸಾಗಲಿದೆ. ಮೇಲ್ವರ್ಗದವರಾಗಿ ದತ್ತಣ್ಣ, ಕೆಳವರ್ಗದವರಾಗಿ ಬಿರಾದರ್ ನಟಿಸಿದ್ದು, ಇಬ್ಬರೂ ಬಹುಕಾಲದ ಗೆಳೆಯರಾಗಿರುತ್ತಾರೆ. ಜಾತಿಯಲ್ಲೂ ಭೇದವೆಣಿಸದ ಅವರು ನೋಡುಗರಿಂದ ಆಕ್ಷೇಪಣೆ ಬರುತ್ತಿದ್ದರೂ ಸಹ ಅದೆಕ್ಕೆಲ್ಲ ಕೇರ್ ಮಾಡಲಾರದವರಾಗಿರುತ್ತಾರೆ. ಹೀಗಿದ್ದಾಗ ಅವರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮುನಿಸು ಪ್ರಾರಂಭವಾಗಿ ಮುಂದೆ ತಮ್ಮ ತಪ್ಪಿನ ಅರಿವಾಗ ಹೇಗೆ ಬದಲಾಗುತ್ತಾರೆ ಎಂಬುದೇ ತಮಟೆ ನರಸಿಂಹಯ್ಯ. ಪಾತ್ರವರ್ಗಗಳ ಆಯ್ಕೆ ಪ್ರಕ್ರಿಯೆ ಸಾಗಲಿದ್ದು, ನಿರ್ದೇಶಕರು ಪಾತ್ರಗಳ ಹುಡುಕಾಟದಲ್ಲಿಯೂ ಇದ್ದಾರೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಲಿದೆ. ಇನ್ನು ಶಿವ ಸತ್ಯ ಸಂಗೀತ, ಶೇಖರ್ ಛಾಯಾಗ್ರಹಣ, ಮುತ್ತುರಾಜ್ ಸಂಕಲನ, ಚಿತ್ರಕ್ಕಿದೆ. ರಾಜೇಶ್ವರಿ ಸೋಮಶೇಖರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ತಮಟೆ ನರಸಿಂಹಯ್ಯನ ಚಿತ್ರೀಕರಣ ಮುಂದಿನ ವಾರದಿಂದ ಶುರುವಾಗಲಿದೆ.











































