ಚಿತ್ರೀಕರಣಕ್ಕೆ ಬೀಗ!

Picture of Cinibuzz

Cinibuzz

Bureau Report

ಈ ಹಿಂದೆ ದರ್ಶನ್ ಮತ್ತು ಜಗ್ಗೇಶ್ ಅಭಿನಯದ ಅಗ್ರಜ ಮತ್ತು ಸುಮಂತ್ ಶೈಲೇಂದ್ರ ನಟನೆಯ ಲೀ ಎಂಬ ಎರಡು ಸಿನಿಮಾಗಳನ್ನು ನಿರ್ದೇಶಿಸಿದ್ದ ಎಚ್.ಎಂ.ಶ್ರೀನಂದನ್ ನಿರ್ದೇಶನದ 3ನೇ ಚಿತ್ರ ಬೀಗ. ಈ ಸಲ ಅವರು ಒಂದು ಸೈಂಟಿಫಿಕ್ ಮಿಸ್ಟರಿ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಕೊನೇ ದಿನದ ಚಿತ್ರೀಕರಣ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿತ್ತು. ಪತ್ರಕರ್ತರೊಂದಿಗೆ ಮಾತು ಆರಂಭಿಸಿದ ಶ್ರೀನಂದನ್, ಇದು ಒಂದು ವರ್ಷದ ಪ್ರಾಜೆಕ್ಟ್. ರವಿಶಂಕರ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರು ರಂಗ ಎಂಬ ವ್ಯಕ್ತಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಲಾಕ್ ಓಪನ್ ಮಾಡಿದ ಮೇಲೆ ಏನೇನಾಗುತ್ತದೆ ಎನ್ನುವುದೇ ಬೀಗ ಚಿತ್ರದ ಕಥೆ. ನಿರ್ಮಾಪಕ ರಮೇಶ್‌ರೆಡ್ಡಿ ಚಿತ್ರದ ನಿರ್ಮಾಪಕರಗಿ ತುಂಬಾ ಸಪೋರ್ಟ್ ಮಾಡಿದ್ದಾರೆ. ಎಲ್ಲಾ ಜವಾಬ್ದಾರಿ ನನ್ನ ಮೇಲೆ ವಹಿಸಿದ್ದಾರೆ. ಮೇಜರ್ ಶೇರ್ ಕೂಡ ಕೊಟ್ಟಿದ್ದಾರೆ. ಒಬ್ಬ ಹೆಣ್ಣು ಮಗು ರೋಡ್ ಮೇಲೆ ಬಂದರೆ ಏನೇನಾಗುತ್ತದೆ. ಆ ಥರ ಮೈಂಡ್ ಸೆಟ್ ಇದ್ದವರು ಬದಲಾಗಬೇಕು ಎನ್ನುವುದೇ ನಮ್ಮ ಚಿತ್ರದ ಆಶಯ. ಚಿತ್ರದಲ್ಲಿ 4 ಆಕ್ಷನ್ ಹಾಗೂ 5  ಹಾಡುಗಳಿವೆ. ಬೆಂಗಳೂರು ಸುತ್ತಮುತ್ತ ಹಾಗೂ ಆರ್.ಎಸ್.ಸ್ಟುಡಿಯೋದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ ಎಂದು ಹೇಳಿದರು.

ಸಹರಾ ಅಕ್ಷ ಈ ಚಿತ್ರದ ನಾಯಕಿ. ಆಕಾಶ್, ಇರ್ಫಾನ್, ಕುಮಾರ್, ಮೈಸೂರು ರಮಾನಂದ ಉಳಿದ ಪಾತ್ರಗಳಲ್ಲಿ ನಟಿಸಿದ್ದು, ಗುರುಪ್ರಿಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಜೊತೆಗೆ ಶರಣ್ಯ ಎಂಬ ಮಗು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ.

ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡುತ್ತ, ವಿಎಂಆರ್ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸುತ್ತಿರುವ ಮೊದಲ ಚಿತ್ರ. ಬಹಳ ವರ್ಷಗಳಿಂದ ಒಂದು ಸಿನಿಮಾ ಮಾಡಬೇಕೆಂಬ ಪ್ಲ್ಯಾನ್ ಇತ್ತು. ಶ್ರೀನಂದನ್ ಅವರು ಹೇಳಿದ ಕಥೆ ತುಂಬಾ ವಿಭಿನ್ನವಾಗಿತ್ತು. ಹಾಗಾಗಿ ಈ ಚಿತ್ರದಿಂದಲೇ ಆರಂಬಿಸಿದ್ದೇವೆ. ಚಿತ್ರದ ಎಲ್ಲಾ ಜವಾಬ್ದಾರಿಯನ್ನು ನಿರ್ದೇಶಕರ ಮೇಲೆ ಹೊರಿಸಿದ್ದೇವೆ ಎಂದು ಹೇಳಿದರು.

ಇನ್ನಷ್ಟು ಓದಿರಿ

Scroll to Top