ಕೌರವೇಂದ್ರನ ಕಲರ್ ಫುಲ್ ಎಂಟ್ರಿ!

Picture of Cinibuzz

Cinibuzz

Bureau Report

ಚಂದನವನದಲ್ಲಿ ಡಾ. ರಾಜ್ ಕುಮಾರ್ ಅವರನ್ನು ಬಿಟ್ಟರೇ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಬಲ್ಲ ಏಕೈಕ ಕನ್ನಡದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಆ ಪಾತ್ರಗಳಿಗೆ ಇರಬೇಕಾದ ಗತ್ತು, ಗಾಂಭೀರ್ಯ ಇತ್ಯಾದಿಗಳೆಲ್ಲವೂ ದರ್ಶನ್ ಗೆ ರಕ್ತಗತವಾಗಿಯೇ ಬಂದಿದೆ. ಅಂತಹ ಎಲ್ಲ ನಿದರ್ಶನಗಳು ಸದ್ಯದಲ್ಲಿಯೇ ಕುರುಕ್ಷೇತ್ರದ ಮೂಲಕ ಅನಾವರಣಗೊಳ್ಳಲಿದೆ‌. ಅಂದಹಾಗ ಅದಕ್ಕೆ ಸ್ಯಾಂಪಲ್ ಎನ್ನುವಂತೆ ಕುರುಕ್ಷೇತ್ರದ ಸಾಹೋರೇ ಸಾಹೋ ಅಜಾನುಬಾಹು ಲಿರಿಕಲ್ ಹಾಡು ಇಂದು ಬಿಡುಗಡೆಯಾಗಿದ್ದು ಕೌರವೇಶ್ವರನ ವ್ಯಕ್ತಿತ್ವವನ್ನು ವಿವಿಧ ಆಯಾಮಗಳಲ್ಲಿ ವರ್ಣಿಸಿದೆ.

ಆ ವರ್ಣನೆಗೆ ತಕ್ಕಂತಹ ಲಕ್ಷಣಗಳನ್ನು ದರ್ಶನ್ ಹೊಂದಿರೋದು ಅಭಿಮಾನಿಗಳೂ ಕುಣಿದು ಕುಪ್ಪಳಿಸುವಂತೆ ಮಾಡಿದೆ. ಈ ಗೀತೆಯನ್ನು ಡಾ. ನಾಗೇಂದ್ರ ಪ್ರಸಾದ್ ಬರೆದಿದ್ದು ವಿಜಯ್ ಪ್ರಕಾಶ್ ಮತ್ತು ತಂಡ ಹಾಡಿದೆ. ಯೂಟ್ಯೂಬ್ ನಲ್ಲಿ ಈಗಾಗಲೇ ಟ್ರೆಡಿಂಗ್ ಕ್ರಿಯೇಟ್ ಮಾಡಿರುವ ಕುರುಕ್ಷೇತ್ರದ ಈ ಹಾಡು ಸೋಶಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದೆ.

ಇನ್ನಷ್ಟು ಓದಿರಿ

Scroll to Top