ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡವೂ ಸೇರಿದಂತೆ 13 ಭಾಷೆಗಳಲ್ಲಿ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸದಭಿರುಚಿಯ ನಿರ್ದೇಶಕ ರಿಷಬ್ ಶೆಟ್ಟಿ ಪ್ರಶಂಸಿಸಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಂಸತ್ತಿನ ತಮ್ಮ ಚೊಚ್ಚಲ ಭಾಷಣದಲ್ಲಿಯೇ ಈ ಕುರಿತು ಬೇಡಿಕೆಯನ್ನಿಟ್ಟಿದ್ದರು. ಅದನ್ನು ಶೀಘ್ರದಲ್ಲಿಯೇ ಕೇಂದ್ರ ನೆರವೇರಿಸಲು ಮನಸ್ಸು ಮಾಡಿದೆ. ಲಕ್ಷಾಂತರ ಕನ್ನಡ ವಿದ್ಯಾರ್ಥಿಗಳೂ ಸಹ ಇದನ್ನು ಸ್ವಾಗತಿಸಿದ್ದಾರೆ.
ಬ್ಯಾಂಕಿಗೆ ಹೊದಾಗ ಅಲ್ಲಿನ ಸಿಬ್ಬಂದಿಗೆ ಕನ್ನಡ ಬರದೇ ಏನೇನೋ ಎಡವಟ್ಟಾದ ಅನುಭವಗಳು ಸಾಮಾನ್ಯವಾಗಿ ಎಲ್ಲರಿಗೂ ಆಗಿವೆ. ಆದರೆ ಇನ್ನು ಮುಂದೆ ಬ್ಯಾಂಕಿಗ್ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನೆಡೆಸುವ ಕೇಂದ್ರ ಸರ್ಕಾರದ ಈ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ. 👍🏼
— Rishab Shetty (@shetty_rishab) July 4, 2019
ಈ ವಿಚಾರದ ಕುರಿತು ಸರಣಿ ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ ಬ್ಯಾಂಕಿಗೆ ಹೋದಾಗ ಅಲ್ಲಿನ ಸಿಬ್ಬಂದಿಗಳು ಕನ್ನಡ ಬಾರದೇ ಸಾಕಷ್ಟು ಎಡವಟ್ಟುಗಳು ಆಗುತ್ತಲೇ ಇರುತ್ತವೆ.ಇನ್ನಾದರೂ ಆ ಎಡವಟ್ಟುಗಳನ್ನು ಸಾಲ್ವ್ ಮಾಡಲು ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡವೂ ಸೇರಿದಂತೆ13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ತೀರ್ಮಾನಿಸಿರುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ.
https://twitter.com/shetty_rishab/status/1146753275472990208
ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರಕಿದಂತಾಗುತ್ತದೆ. ಇದೇ ರೀತಿ ರೈಲ್ವೆ ಇಲಾಖೆ, ಶಿಕ್ಷಣ ಇಲಾಖೆ, ಕಾನೂನು ಇಲಾಖೆಗಳಲ್ಲಿ ಆಯಾ ಸ್ಥಳೀಯರಿಗೆ ಪ್ರಾತಿನಿಧ್ಯ ದೊರೆತಲ್ಲಿ ಆಯಾ ನೆಲದ ಸಂಸ್ಕೃತಿ, ಭಾಷೆ ಉಳಿದಂತಾಗುತ್ತದೆ’ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.











































