ಸದಭಿರುಚಿಯ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ನಲ್ಲಿ ಚಾಪು ಮೂಡಿಸಿ ಡಿಟೆಕ್ಟೀವ್ ದಿವಾಕರನಾಗಿಯೂ ಕನ್ನಡಿಗರ ಮನಗೆದ್ದ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ. ಸ.ಹಿ.ಪ್ರಾ.ಶಾಲೆಯ ಯಶಸ್ಸಿನ ನಂತರ ರಿಷಬ್ ಶೆಟ್ಟಿ ನಟನೆಯತ್ತ ಮುಖ ಮಾಡಿ ಯಾವುದೇ ಸಿನಿಮಾವನ್ನು ಅನೌನ್ಸ್ ಕೂಡ ಮಾಡಿರಲಿಲ್ಲ. ನಿನ್ನೆ ಅವರ ಹುಟ್ಟುಹಬ್ಬದ ಪ್ರಯುಕ್ತ ರುದ್ರ ಪ್ರಯಾಗ ಎಂಬ ಸಿನಿಮಾ ಟೈಟಲ್ ಲಾಂಚ್ ಮಾಡಿರುವ ಅವರು ಪೋಸ್ಟರನ್ನು ರಿಲೀಸ್ ಮಾಡಿದ್ದಾರೆ.
https://twitter.com/shetty_rishab/status/1147577319956996096
ಉತ್ತರಾಖಂಡದ ಕಲಾ ಕೇಂದ್ರವಾಗಿರುವ ರುದ್ರಪ್ರಯಾಗ ಅಲಕಾನಂದ ಮತ್ತು ಮಂದಾಕಿನಿಯ ಸಂಗಸ್ಥಾನವಾಗಿದೆ. ಅಲ್ಲದೇ ಹಿಮಾಲಯದ ಪವಿತ್ರ ನದಿಗಳ ಸಂಗಕ್ಷೇತ್ರಗಳ ಪೈಕಿ ಅದೂ ಇದು, ರಿಷಬ್ ಶೆಟ್ಟಿ ತಮ್ಮ ಚಿತ್ರಕ್ಕೆ ಆ ಹೆಸರನ್ನು ಚ್ಯೂಸ್ ಮಾಡಿರೋದು ಅಭಿಮಾನಿಗಳಲ್ಲಿ ಕುತೂಹಲವನ್ನು ಉಂಟು ಮಾಡಿದೆ. ವಿಶೇಷವೆಂದರೆ ಸಿನಿಮಾದ ಪೋಸ್ಟರ್ ನಲ್ಲಿ ಚಿರತೆ, ಕಾಡು, ನದಿಯ ಚಿತ್ರಣವಿದ್ದು, ರಾಣಿ ಚೆನ್ನಮ್ಮನ ಪ್ರತಿಮೆ, ವಿಧಾನ ಸೌಧದ ಚಿತ್ರವೂ ಇದೆ. ಟೈಟಲ್ಲಿಗೂ ಅಲ್ಲಿರುವ ಚಿತ್ರಕ್ಕೂ ಎಲ್ಲಿಂದೆಲ್ಲಿಯ ಸಂಬಂಧವೂ ಇಲ್ಲದ ಟೈಪು ರಿಷಬ್ ಪ್ರೇಕ್ಷಕರ ತಲೆಗೆ ಹುಳ ಬಿಡುವ ಪ್ರಯತ್ನವನ್ನು ಮಾಡಿದ್ದಾರೆ. ಇನ್ನು ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದು, ಜಯಣ್ಣ ಭೋಗೇಂದ್ರ ಬಂಡವಾಳ ಹೂಡುತ್ತಿದ್ದಾರೆ.











































