ಕಂಸ ಚಿತ್ರದ ಮೂಲಕ ಚಂದನವನಕ್ಕೆ ಮತ್ತೆ ಕಮ್ ಬ್ಯಾಕ್ ಆಗಿರುವ ಲೂಸ್ ಮಾದ ಯೋಗಿ ಕೃಪಾ ಸಾಗರ್ ನಿರ್ದೇಶನದ ಸಾರ್ವಜನಿಕರಲ್ಲಿ ವಿನಂತಿ ಎಂಬ ಸಿನಿಮಾವನ್ನು ನೋಡುತ್ತಿದ್ದಾರೆ. ಹೌದು… ನಾಳೆ ಬೆಳಿಗ್ಗೆ 11.30ಕ್ಕೆ ಸವಿತಾ ಚಿತ್ರಮಂದಿರದಲ್ಲಿ ಪ್ರೇಕ್ಷಕರೊಂದಿಗೆ ಲೂಸ್ ಮಾದ ಸಿನಿಮಾವನ್ನು ನೋಡಲಿದ್ದು, ಅಭಿಮಾನಿಗಳು ಅವರೊಂದಿಗೆ ಸಿನಿಮಾವನ್ನು ನೋಡುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಸಾರ್ವಜನಿಕರಲ್ಲಿ ವಿನಂತಿ ಸಿನಿಮಾ ಟೈಟಲ್ ನಿಂದ ಹಿಡಿದು ಬಹಳಷ್ಟು ವಿಚಾರಕ್ಕೆ ಸದ್ದು ಮಾಡಿದ ಸಿನಿಮಾ. ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕರ ಜತೆಗೆ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದ ಕೃಪಾಸಾಗರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಇವರ ಸ್ನೇಹಿತರು, ತಂದೆ, ತಾಯಿಯೇ ಈ ಚಿತ್ರಕ್ಕೆ ಬಂಡವಾಳವನ್ನು ಹೂಡಿರುವುದು ವಿಶೇಷವಾಗಿದೆ. ಪೊಲೀಸರಿಗೆ ಸಮರ್ಪಿಸಿದ್ದ ಈ ಸಿನಿಮಾ ಪೊಲೀಸರು ಸ್ಥಿತಿಗತಿಗಳು, ಕಷ್ಟನಷ್ಟಗಳ ಮೇಲೂ ಬೆಳಕುಚೆಲ್ಲಿ ಕರ್ನಾಟಕ ಪೊಲೀಸರಿಂದಲೂ ಪ್ರಶಂಸೆಗೂ ಪಾತ್ರವಾಗಿದೆ.











































