ತೆರೆಗೆ ಬರಲಿದೆ ರಾಮಾಯಣ!

Picture of Cinibuzz

Cinibuzz

Bureau Report

ದಕ್ಷಿಣ ಭಾರತದಲ್ಲಿ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಹಳಷ್ಟು ಸದ್ದು ಮಾಡುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಲಿದೆ. ಇದೀಗ ಕುರುಕ್ಷೇತ್ರ ಹವಾ ದಿನೇ ದಿನೇ ಹೆಚ್ಚಾಗುತ್ತಿರುವ ಜತೆಯಲ್ಲಿ ರಾಮನ ಕಥೆಯೂ ಸಿನಿಮಾವಾಗುವ ಹೊಸ ನ್ಯೂಸು ಹೊರಬಿದ್ದಿದೆ.

ಯೆಸ್.. ಬಾಲಿವುಡ್ ನ ಮಂದಿ ರಾಮಾಯಣ ಆಧಾರಿತ ಸಿನಿಮಾ ಮಾಡಲು ರೆಡಿಯಾಗಿದ್ದು, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಮೇಕಿಂಗ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ದಂಗಲ್ ಖ್ಯಾತಿಯ ನಿತೀಶ್ ತಿವಾರಿ ಮತ್ತು ರವಿ ಉದ್ಯರ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್, ಮಧು ಮಂತೇನಾ, ನಮಿತ್ ಮಲ್ಹೋತ್ರಾ ಬಂಡವಾಳ ಹೂಡಲಿದ್ದಾರೆ. ಉಳಿದಂತೆ ಚಿತ್ರದ ಕುರಿತಾದ ಎಕ್ಸ್ ಕ್ಲೂಸಿವ್ ಸಂಗತಿಗಳನ್ನು ಸದ್ಯದಲ್ಲಿಯೇ ಅನೌನ್ಸ್ ಕೂಡ ಮಾಡಲಾಗುವುದೆಂದು ಚಿತ್ರತಂಡ ತಿಳಿಸಿದೆ.

ಇನ್ನಷ್ಟು ಓದಿರಿ

Scroll to Top