ಆಗಸ್ಟ್ 6ರಂದು `ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರೀಕರಣ ಶುರು!

Picture of Cinibuzz

Cinibuzz

Bureau Report

ಗೋಧಿಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾದ ನಂತರ ಮತ್ತೊಂದು ಕಾಣೆಯಾದವರ ಹುಡುಕಾಟದ ಸಿನಿಮಾ ಬರಲಿದೆ. ಹೌದು.. ಚಿತ್ರಕ್ಕೆ ಕಾಣೆಯಾದವರ ಬಗ್ಗೆ ಪ್ರಕಟಣೆ ಎಂದು ಟೈಟಲಿಟ್ಟಿದ್ದು, ಆಗಸ್ಟ್ 6ರಿಂದ ಚಿತ್ರೀಕರಣ ಶುರುವಾಗಲಿದೆ. ಅನಿಲ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ ಹಿಂದೆ `ಶಕ್ತಿ`, `ದಿಲ್‍ವಾಲ`, `ಕೃಷ್ಣ ರುಕ್ಕು`, `Rambo 2` `ಕಿರಾತಕ 2`, ದಾರಿ ತಪ್ಪಿದ ಮಗ` ಸಿನಿಮಾವನ್ನು ಅನಿಲ್ ನಿರ್ದೇಶಿಸಿದ್ದರು.

ಬಿಲ್ವ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ನವೀನ್ ಅವರು ಈ ಸಿನಿಮಾವನ್ನು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. 65 ವರ್ಷ ಮೇಲ್ಪಟವರ (ಹಿರಿಯ ನಾಗರಿಕರ) ಬಗ್ಗೆಗಿನ ಕಥಾ ಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರವಿಶಂಕರ್, ರಂಗಾಯಣ ರಘು, ತಬಲನಾಣಿ ಅಭಿನಯಿಸುತ್ತಿದ್ದಾರೆ.  ಬ್ಯಾಂಕಾಕ್‍ನಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಇನ್ನಷ್ಟು ಓದಿರಿ

Scroll to Top