ಹ್ಯಾಟ್ರಿಕ್ ಹೀರೋ ಸರ್ಜರಿ ಸಕ್ಸಸ್!

Picture of Cinibuzz

Cinibuzz

Bureau Report

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶೂಟಿಂಗ್ ಗೆ ಬ್ರೇಕ್ ಕೊಟ್ಟು ಶಸ್ತ್ರ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದರು. ಸದ್ಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿದ್ದು, ಚೇತರಿಸಿಕೊಳ್ಳುತ್ತಾರೆಂದು ಕೆ.ಪಿ. ಶ್ರೀಕಾಂತ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಸಿನಿಮಾ ಸಾಹಸ ದೃಶ್ಯದ ಶೂಟಿಂಗ್‌ ವೇಳೆ ಅವರ ಬಲ ಭುಜಕ್ಕೆ ಗಾಯವಾಗಿದ್ದು ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಕಷ್ಟಪಡುವಂತಾಗಿತ್ತು. ತಮ್ಮ ಬಲ ಭುಜದ ನೋವಿನ ಸಮಸ್ಯೆಯಿಂದ ಲಂಡನ್ ಗೆ ತೆರಳಿದ್ದ ಶಿವಣ್ಣ ಆಪರೇಷನ್ ಗೆ ಒಳಗಾಗಿದ್ದರು. ಇನ್ನು 3 ತಿಂಗಳುಗಳ ಕಾಲ ಯಾವುದೇ ಚಿತ್ರದ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಬಿಲ್ ಕುಲ್ ಸಾಧ್ಯವಿಲ್ಲವಂತೆ. ವಿಶೇಷವೆಂದರೆ ಎಸ್.ಎಂ.ಕೃಷ್ಣ, ಶಾರುಖ್ ಖಾನ್ ರನ್ನು ಟ್ರೀಟ್ ಮಾಡಿದ್ದ ವೈದ್ಯರೇ ಶಿವಣ್ಣ ಅವರನ್ನೂ ಟ್ರೀಟ್ ಮಾಡಿದ್ದರು. ಶಿವಣ್ಣ ಸರ್ಜರಿಗೆ ಹೋಗುವುದು ತಿಳಿಯುತ್ತಿದ್ದಂತೆ ಸ್ವತಃ ರಾಘವೇಂದ್ರ ರಾಜ್ ಕುಮಾರ್, ಶಿವಣ್ಣ ಅಭಿಮಾನಿಗಳು ಪೂಜೆ ಹೋಮ ಹವನಗಳನ್ನು ಮಾಡಿದ್ದರು.

ಇನ್ನಷ್ಟು ಓದಿರಿ

Scroll to Top