ತೋತಾಪುರಿಯಲ್ಲಿ ಡಾಲಿ ಬರೆದ ಸಾಂಗು!

Picture of Cinibuzz

Cinibuzz

Bureau Report

ಟಗರು ಸಿನಿಮಾದ ಬಳಿಕ ತನ್ನದೇ ಆದ ಚಾರ್ಮ್ ಸೃಷ್ಟಿಸಿಕೊಂಡಿರುವ ಡಾಲಿ ಧನಂಜಯ್ ನಟನೆಯ ಜತೆಗೆ ಗೀತ ರಚನೆಯಲ್ಲಿಯೂ ಸಹ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಮೂಲತಃ ರಂಗ ಭೂಮಿಯ ಹಿನ್ನೆಲೆಯವರಾದ ಧನಂಜಯ್ ಬಹುಮುಖ ಪ್ರತಿಭೆ. ಈಗಾಗಲೇ ನಾಯಕನಾಗಿ, ಖಳ ನಟನಾಗಿ, ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದಾರೆ.

ಇತ್ತೀಚಿಗಷ್ಟೇ ಹರಿಪ್ರಿಯ ಮತ್ತು ಸುಮಲತಾ ಕಾಂಬಿನೇಷನ್ನಿನ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಜೀವಕಿಲ್ಲಿ ನೀವ ಭೇಟೆ ಎಂಬ ಗೀತೆಯನ್ನು ರಚಿಸಿದ್ದ ಧನಂಜಯ್ ಸದ್ಯ ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಕಾಂಬಿನೇಷನ್ನಿನ ತೋತಾಪುರಿ ಚಿತ್ರಕ್ಕೂ ಗೀತೆಯನ್ನು ಬರೆದಿದ್ದಾರೆ. ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.  ಜಯನಗರ 4ನೇ ಬ್ಲಾಕ್ ಕಿರುಚಿತ್ರದಿಂದಲೂ ಬರವಣಿಗೆಯಲ್ಲಿ ಗುರುತಿಸಿಕೊಂಡಿರುವ ಧನಂಜಯ್ ನಟನೆಯ ಜತೆಗೆ ಪ್ರೊಡಕ್ಷನ್ ಕೆಲಸಗಳಲ್ಲಿ ಅತೀವ ಆಸಕ್ತಿಯನ್ನು ಉಳ್ಳವರಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top